ADVERTISEMENT

ಭಗವದ್ಗೀತೆ ಓದುವುದರಿಂದ ಖಿನ್ನತೆಗೆ ಪರಿಹಾರ: ಗುಣಾಕರ ರಾಮದಾಸ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 14:06 IST
Last Updated 17 ಆಗಸ್ಟ್ 2024, 14:06 IST
ವಿವೇಕಾನಂದ ಪಿಯು ಕಾಲೇಜಿನಲ್ಲಿ ನಡೆದ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದಲ್ಲಿ ಮಂಗಳೂರಿನ ಇಸ್ಕಾನ್ ಅಧ್ಯಕ್ಷ ಗುಣಾಕರ ರಾಮದಾಸ ಅವರು ಮಾತನಾಡಿದರು
ವಿವೇಕಾನಂದ ಪಿಯು ಕಾಲೇಜಿನಲ್ಲಿ ನಡೆದ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದಲ್ಲಿ ಮಂಗಳೂರಿನ ಇಸ್ಕಾನ್ ಅಧ್ಯಕ್ಷ ಗುಣಾಕರ ರಾಮದಾಸ ಅವರು ಮಾತನಾಡಿದರು   

ಪುತ್ತೂರು: ಜೀವನದ ಆಳವಾದ ಅರ್ಥ, ಉದ್ದೇಶ ಮತ್ತು ನಿರ್ದಿಷ್ಟಗುರಿಯನ್ನು ಸಾಧು-ಸಂತರು, ಶಾಸ್ತ್ರಗಳು ಹಾಗೂ ಪ್ರಾಚೀನ ಗ್ರಂಥವಾದ ಭಗವದ್ಗೀತೆ ತಿಳಿಸಿಕೊಟ್ಟಿದೆ ಎಂದು ಮಂಗಳೂರಿನ ಇಸ್ಕಾನ್ ಅಧ್ಯಕ್ಷ ಗುಣಾಕರ ರಾಮದಾಸ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ಐ ಆಂಜನೇಯ ರೆಡ್ಡಿ ಮಾತನಾಡಿದರು.

ADVERTISEMENT

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಅಧ್ಯಕ್ಷತೆ ವಹಿಸಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಭಾಗವಹಿಸಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ 1,600 ಭಗವದ್ಗೀತೆ ಕೃತಿಯನ್ನು ವಿತರಿಸಲಾಯಿತು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಡಾ.ಕೃಷ್ಣ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ದಿವ್ಯಾ ಕೆ.ಸ್ವಾಗತಿಸಿ, ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್ ರೈ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.