
ಪ್ರಜಾವಾಣಿ ವಾರ್ತೆ
ಎಚ್.ಲಕ್ಷ್ಮಣ್
ಮಂಗಳೂರು: ಭಾರತೀಯ ವಾಯುಪಡೆಯ ಶೌರ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿ, ಚಿಲಿಂಬಿ ಹಿಲ್ ನಿವಾಸಿ ಎಚ್.ಲಕ್ಷ್ಮಣ್ (101) ಸೋಮವಾರ ನಿಧನರಾದರು. ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದ ಅವರು 1948, 1962, 1965, 1971ರ ಯುದ್ಧದಲ್ಲಿ ಭಾಗಿಯಾಗಿದ್ದರು.
ಕರ್ತವ್ಯ ನಿಷ್ಠೆಯಿಂದಾಗಿ ಸಹೋದ್ಯೋಗಿಗಳಿಗೆ ಆದರ್ಶರಾಗಿದ್ದ ಅವರು, ಭಾರತೀಯ ಸ್ವಾತಂತ್ರ್ಯ ಪದಕ, ರಕ್ಷಾ ಪದಕಗಳನ್ನು ಪಡೆದಿದ್ದರು. ಅವರ ಸದ್ಗುಣಗಳಿಂದಾಗಿ ಸಮರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಗಳಿಸಿ ವಿಶೇಷ ನಾಮೋಲ್ಲೇಖ (ಮೆನ಼್ಷನ್- ಇನ್-ಡೆಸ್ಪಾಚ್) ಪ್ರಶಸ್ತಿ, ಗೌರವಾನ್ವಿತ ಶೌರ್ಯ ಪ್ರಶಸ್ತಿ ಪಡೆದಿದ್ದರು. ಅವರಿಗೆ ಮೂವರು ಪುತ್ರರು, ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.