ADVERTISEMENT

ಬಂದೂಕು ತಯಾರಿ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮೇ 2021, 4:37 IST
Last Updated 11 ಮೇ 2021, 4:37 IST

ಮಂಗಳೂರು: ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.

ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಮನೆಯ ದಿವಾಕರ ಆಚಾರಿ, ಸುಬ್ರಹ್ಮಣ್ಯ ನೂಚಿಲ ಮನೆಯ ಕಾರ್ತಿಕ್‌, ಬಿಳಿನೆಲೆ ಗ್ರಾಮದ ಚಿದ್ಗಲ್‌ ಮನೆಯ ಅಶೋಕ್‌ ಎ., ಹಾಸನ ಜಿಲ್ಲೆಯ ಹೊಸಕೊಪ್ಪಲು ಹನುಮಂತಪುರ ಗ್ರಾಮದ ಚಂದನ್‌ ಬಂಧಿತರು. ಆರೋಪಿ ದಿವಾಕರ್‌ ಬಂದೂಕು ತಯಾರಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸುಳ್ಯ ಸರ್ಕಲ್‌ ಇನ್‌ಸ್ಪೆಕ್ಟರ್‌ ನವೀನ್‌ಚಂದ್ರ ಜೋಗಿ, ಪಿಎಸ್‌ಐ ಓಮನಾ ಹಾಗೂ ಸಿಬ್ಬಂದಿ ಸೋಮವಾರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಂದು ಬಂದೂಕು ಹಾಗೂ ಒಂದು ಸಜೀವ ತೋಟೆಯನ್ನು ವಶಕ್ಕೆ ಪಡೆಯಲಾಗಿದೆ.

ಬಂದೂಕು ತಯಾರಿಸಿ ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ಆರೋಪಿ ದಿವಾಕರ ಹೇಳಿದ್ದು, ಈ ಮಾಹಿತಿಯಂತೆ ಕಾರ್ತಿಕ, ಅಶೋಕ, ಚಂದನ ಎಂಬುವವರನ್ನು ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.