ADVERTISEMENT

ಕಾಸರಗೋಡು | ಬೈಕ್-ಲಾರಿ ಡಿಕ್ಕಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 13:35 IST
Last Updated 13 ಆಗಸ್ಟ್ 2024, 13:35 IST

ಕಾಸರಗೋಡು: ಪಳ್ಳಿಕ್ಕರೆಯಲ್ಲಿ ಬೈಕ್ ಮತ್ತು ಲಾರಿ ಡಿಕ್ಕಿಯಾಗಿ, ಬೈಕ್ ಸವಾರ ನೀಲೇಶ್ವರ ಪೇರೋಲ್ ನಿವಾಸಿ ಅಖಿಲ್ ದೇವ್ (26) ಮೃತಪಟ್ಟಿದ್ದಾರೆ. ಸಹ ಸವಾರ ಪಳನೆಲ್ಲಿ ನಿವಾಸಿ ಮಿಥುನ್ (24) ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತ ನಡೆದ ತಕ್ಷಣ ನಿಲ್ಲಸದೆ ಪರಾರಿಯಾಗಿದ್ದ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಕಾಞಂಗಾಡಿನಲ್ಲಿ ವಶಪಡಿಸಿದ್ದಾರೆ.

ಇಬ್ಬರಿಗೆ ಗಾಯ

ಕಾಸರಗೋಡು: ಕಾಞಂಗಾಡಿನಲ್ಲಿ ಹಿಮ್ಮುಖವಾಗಿ ಚಲಿಸಿದ ಜೀಪಿನ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಾಯವಾಗಿದೆ.

ADVERTISEMENT

ಹೈದರಾಬಾದ್ ನಿವಾಸಿ ಕಿರಣ್ ರೆಡ್ಡಿ (40) ಮತ್ತು ಜಾರ್ಖಂಡ್‌ ನಿವಾಸಿ ಜಬಾಯಿ (28) ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಜೀಪು ಹಿಮ್ಮುಖವಾಗಿ ಬಂದು ಅವರ ಕಾಲಿನ ಮೇಲೆ ಜೀಪು ಚಲಿಸಿತ್ತು.

ಆರೋಪಿ ಬಂಧನ

ಕಾಸರಗೋಡು: ನೀಲೇಶ್ವರ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಬೈಕ್‌ಅನ್ನು ಕಳವು ಮಾಡಿದ ಆರೋಪಿ ತ್ರಿಶೂರು ಚಿರನಲ್ಲೂರು ನಿವಾಸಿ ಅಬ್ದುಲ್ ಹಮೀದ್ ಎಂಬಾತನನ್ನು ಪೊಲೀಸರು ವಡಗರದಲ್ಲಿ ಬಂಧಿಸಿದ್ದಾರೆ. ನೀಲೇಶ್ವರ ಮಾರ್ಕೆಟ್ ಕದಳಿಕುಳಂ ನಿವಾಸಿ ವಿಷ್ಣು ಮನೋಹರ್ ಎಂಬುವರ ಬೈಕ್‌ಅನ್ನು ಆರೋಪಿ ಸೋಮವಾರ ಮಧ್ಯಾಹ್ನ ಕಳವು ಮಾಡಿದ್ದ.

ಬಂಧನ

ಕಾಸರಗೋಡು: ಕಳವು ಮಾಡಿದ್ದ ಡೀಸೆಲ್ ಖರೀದಿಸಿದ ಆರೋಪಿ, ಪುತ್ತಿಗೆ ಕಟ್ಟತ್ತಡ್ಕ ನಿವಾಸಿ ಶುಕೂರ್ (38) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆ.10ರಂದು ತಡರಾತ್ರಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ಗಳಿಂದ ಕಳವುಮಾಡಿದ್ದ 286 ಲೀ. ಡೀಸೆಲ್‌ಅನ್ನು ಕಳ್ಳರಿಂದ ಆತ ಖರೀಸಿದ್ದ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನ

ಕಾಸರಗೋಡು: ಮೀಯಪದವಿನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಬಂದೂಕು ತೋರಿಸಿ ₹ 10 ಸಾವಿರ ಕಸಿದುಕೊಂಡ ಆರೋಪಿಗಳಾದ ಮೊತ್ತಣೆಯ ಮುಹ್ಮದ್ ಸಾಲಿ (37) ಮತ್ತು ರಾಷಿಕ್ (35) ಎಂಬುವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಗಾಯಾಳು ಸಾವು

ಕಾಸರಗೋಡು: ಚಟ್ಟಂಚಾಲ್-ದೇಳಿ ರಸ್ತೆಯಲ್ಲಿ ಸ್ಕೂಟರ್ ಮಗುಚಿ ಗಂಭೀರ ಗಾಯಗೊಂಡಿದ್ದ ಆರ್.ಎಸ್.ಅಹಮ್ಮದ್ ರಂಸಾನ್ (19) ಎಂಬಾತ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸೋಮವಾರ ನಸುಕಿನಲ್ಲಿ ಅಪಘಾತ ನಡೆದಿತ್ತು. ಆತ ಅಬ್ದುಲ್ ರಝಾಕ್-ಸೆಬಿತಾ ದಂಪತಿ ಪುತ್ರ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಧನ ವಾರ್ತೆ

ರಾಧಾಕೃಷ್ಣ ಎಂಬ್ರಾನ್

ಕಾಸರಗೋಡು: ಹಿರಿಯ ತಂತ್ರಿ, ಕುಂಬಳೆ ಶೇಡಿಕಾವು ನಿವಾಸಿ, ರಾಧಾಕೃಷ್ಣ ಎಂಬ್ರಾನ್ (ರಾಧಾಕೃಷ್ಣ ಕಡಮಣ್ಣಾಯ) (85) ನಿಧನರಾದರು.

ಕುಂಬಳೆ ವಲಯದ ವಿವಿಧ ಆರಾಧನಾಲಯಗಳ ತಂತ್ರಿಯಾಗಿದ್ದರು. 1992ರಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದರು. ಅವರು ಅವಿವಾಹಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.