ಪ್ರಾತಿನಿಧಿಕ ಚಿತ್ರ
ಕಾಸರಗೋಡು: ಬಿರುಸಿನ ಗಾಳಿ-ಮಳೆಗೆ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿತ, ಆವರಣಗೋಡೆ ಕುಸಿತ ಉಂಟಾಗಿದೆ.
ಬಾಯಾರು ಪದವಿನ ಚಿಪ್ಪಾರು ರಸ್ತೆಗೆ ಮಣ್ಣು ಕುಸಿದು ಸಂಚಾರ ಮೊಟಕುಗೊಂಡಿದೆ. ಸಾರ್ವಜನಿಕರ ನೇತೃತ್ವದಲ್ಲಿ ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.
ಚೇರೂರಿನ ಮಾವಿನಕಡವು ತೋಡಿನ ಬದಿಯಲ್ಲಿ ಆವರಣಗೋಡೆ ಕುಸಿದು ಜಲಾಲುದ್ದೀನ್ ಮತ್ತು ಅವರ ಸಹೋದರರ ಮನೆಗಳಿಗೆ ಹಾನಿಯಾಗಿದೆ. ಚೇರೂರು ಸಿ.ಎಚ್.ನಗರದ ಸಿ.ಟಿ.ಇಬ್ರಾಹಿಂ ಎಂಬುವರ ಮನೆಯ ಆವರಣಗೋಡೆ ಕುಸಿದಿದೆ. ಮನೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಮನೆಯವರನ್ನು ಸ್ಥಳಾಂತರಿಸಲಾಗಿದೆ.
ಪುತ್ತಿಗೆ ಪಂಚಾಯಿತಿಯ ಕಂದಲ್ ಬಳಿಯ ಗೂರ್ಮಿನಡ್ಕ ಎಂಬಲ್ಲಿ ಅಣೆಕಟ್ಟೆಗೆ ಸಂಬಂಧಿಸಿದ ಆವರಣಗೋಡೆ ಕುಸಿದು ಅಡಿಕೆ ಮರಗಳು ನೆಲಕ್ಕುರುಳಿವೆ. ಇಲ್ಲಿನ ಕಾಲ್ನಡೆ ರಸ್ತೆ ಜಲಾವೃತವಾಗಿದೆ.
ಕರಿವೇಡಗಂ ಪಳ್ಳಕ್ಕಾಡ್ ಮಾಂದೋಟ್ಟಂ ಎಂಬಲ್ಲಿ ಓಮನಾ ಪ್ರಭಾಕರನ್ ಎಂಬುವರ ಮನೆ ಮೇಲೆ ಮರ ಉರುಳಿ ಹಾನಿಯಾಗಿದೆ. ಪುಣ್ಯಾಳಂ ಕುನ್ನು ಎಂಬಲ್ಲಿ ತೆಂಗು, ಅಡಿಕೆ ಮರಗಳು ಉರುಳಿವೆ. ಆನೆಕಲ್ಲು-ಮಾಲೆಕಲ್ಲು-ಪೂಕಯಂ ರಸ್ತೆಯಲ್ಲಿ ರಬ್ಬರ್ ಮರಗಳು ಉರುಳಿವೆ. ವಿದ್ಯುತ್ ತಂತಿಗಳು ಕಡಿದುಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.