ಮಂಗಳೂರು: ಇಂಧನ ಸಂರಕ್ಷಣಾ ಸಪ್ತಾಹದ ಅಂಗವಾಗಿ ನಗರದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ ಹಾಗೂ ಸಿಎಸ್‌ಇ (ಡೇಟಾ ಸೈನ್ಸ್) ವಿಭಾಗದ ನೇತೃತ್ವ ಮತ್ತು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಇಲಾಖೆ ಸಹಯೋಗದಲ್ಲಿ ಈಚೆಗೆ ‘ಇಂಧನ ಉಳಿತಾಯ ದಿನ’ ಆಚರಿಸಲಾಯಿತು.
ಕ್ರೆಡೆಲ್ ಮುಖ್ಯಸ್ಥ ರಿತೇಶ್ ಪಕ್ಕಳ ಪಿ. ಅವರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕ್ರೆಡೆಲ್‌ನ ಆಡಳಿತ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ಇಂಧನ ಉಳಿತಾಯದ ಮಹತ್ವವನ್ನು ಕುರಿತು ಮತ್ತು ಕರ್ನಾಟಕದ ಇಂಧನ ಉಳಿತಾಯ ಹಾಗೂ ಇಂಧನ ದಕ್ಷತೆಯ ನೀತಿ ಕುರಿತು ಮಾತನಾಡಿದರು.
ಜನವರಿ 8ರಂದು ನಡೆದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೈಡ್ಜೆನ್‌ನ ಸಹ-ಸಂಸ್ಥಾಪಕ ಮತ್ತು ಸಿಒಒ ಎಂ. ಕೃಷ್ಣ ಕುಮಾರ್ ಅವರು ಎಂಜಿನಿಯರಿಂಗ್‌ನಲ್ಲಿ ಇಂಧನ ಸಂರಕ್ಷಣೆಯ ಮಹತ್ವ, ಹವಾಮಾನ ಬದಲಾವಣೆ, ಡಿಕಾರ್ಬೊನೈಸೇಶನ್ ತಂತ್ರಜ್ಞಾನ, ಹಸಿರು ಹೈಡ್ರೋಜನ್ ಮತ್ತು ಶಕ್ತಿ ಪರಿವರ್ತನೆ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ತಿಕ್ ಉಪನ್ಯಾಸ ನೀಡಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ವಾಕಥಾನ್‌ನ್‌ಗೆ ಎಸ್‌ಸಿಇಎಂ ಪ್ರೊಫೆಸರ್ ಮತ್ತು ಸಿಒಒ- ಶ್ರೀನಾಥ್ ಎಸ್ ಚಾಲನೆ ನೀಡಿದರು. ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಮಂಜಪ್ಪ ಸಾರಥಿ, ಉಪಪ್ರಾಂಶುಪಾಲ ಸುಧೀರ್ ಶೆಟ್ಟಿ ಇದ್ದರು.
200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂಧನ ಸಂರಕ್ಷಣೆ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅಡ್ಯಾರ್ ಪ್ರದೇಶದ 200ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದರು.
ಕಾರ್ಯಕ್ರಮವನ್ನು ಐಎಸ್‌ಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞಾ ಯು.ಆರ್. ಸಂಯೋಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.