ADVERTISEMENT

ಸಮುದ್ರದಲ್ಲಿ ನೀಲಿ‌ವರ್ಣ; ಪ್ಲಾಂಕ್ಟನ್, ಬ್ಯಾಕ್ಟಿರೀಯಾ ಕಾರಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 8:21 IST
Last Updated 24 ನವೆಂಬರ್ 2020, 8:21 IST
ಸಮುದ್ರದಲ್ಲಿ ಕಾಣಿಸಿಕೊಂಡ ನೀಲಿವರ್ಣ
ಸಮುದ್ರದಲ್ಲಿ ಕಾಣಿಸಿಕೊಂಡ ನೀಲಿವರ್ಣ   
""
""

ಮಂಗಳೂರು: ಸಮುದ್ರದಲ್ಲಿ‌ನೀಲಿ, ಹಸಿರು ಬಣ್ಣದ ತೆರೆಗಳು ಕಾಣಿಸುತ್ತಿದ್ದು, ಅಚ್ಚರಿ ಮೂಡಿಸಿದೆ.
ಸೋಮೇಶ್ವರ, ಉಚ್ಚಿಲ, ಸಿಸಿಹಿತ್ಲು ಬೀಚ್ ಗಳಲ್ಲಿ ಈ‌ ವಿದ್ಯಮಾನ ಕಾಣಿಸಿಕೊಂಡಿದೆ. ಹಲವಾರು ಜನರು ಇದನ್ನು ನೋಡಲು ಸಮುದ್ರದ‌ ತೀರಗಳಿಗೆ ತೆರಳುತ್ತಿದ್ದಾರೆ.

ಈ ಕುರಿತು ಅಧ್ಯಯನ ನಡೆಸಿರುವ‌ ಇಲ್ಲಿನ ಮೀನುಗಾರಿಕೆ ಕಾಲೇಜಿನ ವಿಜ್ಞಾನಿಗಳು, ಇದು ಪ್ಲಾಂಕ್ಟನ್ ಹಾಗೂ ಬ್ಯಾಕ್ಟಿರಿಯಾಗಳಿಂದ ಆಗುತ್ತಿದೆ ಎಂದು ತಿಳಿಸಿದ್ದಾರೆ.

ನೀರಿನ ಮಾದರಿಯನ್ನು ಸಂಗ್ರಹಿಸಿ, ಮೈಕ್ರೋಸ್ಕೋಪ್ ಮೂಲಕ ಪರೀಕ್ಷಿಸಲಾಗಿದೆ. ಪ್ಲಾಂಕ್ಟನ್ ಮತ್ತು ಬ್ಯಾಕ್ಟಿರೀಯಾಗಳು ಗೋಚರಿಸಿವೆ ಎಂದು ಕಾಲೇಜಿನ ಡೀನ್ ಡಾ.ಎ. ಸೆಂಥಿಲ್ ವೇಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.