ADVERTISEMENT

ಪುತ್ತೂರು: ಸ್ವದೇಶಿ ಜಾಗರಣ ಸೈಕಲ್ ಜಾಥಾಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:33 IST
Last Updated 18 ಡಿಸೆಂಬರ್ 2025, 6:33 IST
ಸ್ವದೇಶಿ ಜಾಗರಣ ಸೈಕಲ್ ಜಾಥಾದಲ್ಲಿ ಡಾ.ಪ್ರಭಾಕರ ಭಟ್, ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಡಾ ಕೆ.ಎಂ ಕೃಷ್ಣ ಭಟ್ ಸೈಕಲ್ ಸವಾರಿ ಮಾಡಿದರು
ಸ್ವದೇಶಿ ಜಾಗರಣ ಸೈಕಲ್ ಜಾಥಾದಲ್ಲಿ ಡಾ.ಪ್ರಭಾಕರ ಭಟ್, ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಡಾ ಕೆ.ಎಂ ಕೃಷ್ಣ ಭಟ್ ಸೈಕಲ್ ಸವಾರಿ ಮಾಡಿದರು   

ಪ್ರಜಾವಾಣಿ ವಾರ್ತೆ

ಪುತ್ತೂರು: ‘ಸ್ವದೇಶಿ ಬಳಸಿ, ದೇಶ ಬೆಳೆಸಿ' ಘೋಷವಾಕ್ಯದಡಿ ಸ್ವದೇಶಿ ಉತ್ಪನ್ನಗಳ ಬಳಕೆ ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್, ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಬುಧವಾರ ಪುತ್ತೂರಿಗೆ ತಲುಪಿತು.

ಜಾಥಾವನ್ನು ದರ್ಬೆ ವಿನಾಯಕ ನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಜನರು ಆರತಿ ಬೆಳಗಿ ಸ್ವಾಗತ ಕೋರಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡಿದರು.ದರ್ಬೆ ವಿನಾಯಕ ನಗರದಿಂದ ಹೊರಟ ಜಾಥಾ ಪುತ್ತೂರು ಮುಖ್ಯರಸ್ತೆಯಾಗಿ ನೆಹರುನಗರ ವಿವೇಕಾನಂದ ಕಾಲೇಜು ಅವರಣದ ತನಕ ನಡೆಯಿತು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಸೈಕಲ್ ಸವಾರಿ ಮಾಡಿದರು.

ADVERTISEMENT

ಜಾಥಾದಲ್ಲಿ ಮಾಜಿ ಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಎಂಜಿನಿಯರ್ಗಳು, ವೈದ್ಯರು, ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾಥರ್ಿಗಳು ಹಾಗೂ ಪುತ್ತೂರಿನ ನಾಗರಿಕರು ಪಾಲ್ಗೊಂಡರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ಹರಿಪ್ರಸಾದ್ ಯಾದವ್, ಮಾಜಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ಮಣಿಕಂಠ, ಬಿಜೆಪಿ ಮುಖಂಡ ಹರೀಶ್ ಬಿಜತ್ರೆ, ವಿವೇಕಾನಂದ ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ,ಪ್ರಾಂಶುಪಾಲ ದೇವಿಚರಣ್ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ರೈ, ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್, ರಮೇಶ್ ಪ್ರಭು, ಚಂದ್ರಶೇಖರ ಮೂಡಾಯೂರು ಮತ್ತಿತರರು ಇದ್ದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಜಾಥಾ ತಂಡದ ಜತೆ ವಿಶೇಷ ಸಂವಾದ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.