ಮಂಗಳೂರು: ‘ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಶಾಲೆಗಳಲ್ಲಿ ವರ್ಷದಲ್ಲಿ 220 ಕಲಿಕಾ ದಿನಗಳ ಅಗತ್ಯವಿದೆ. ಈ ಶೈಕ್ಷಣಿಕ ವರ್ಷದಲ್ಲಿ 240 ಕಲಿಕಾ ದಿನಗಳು ಲಭ್ಯ ಇದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಲುವಾಗಿ 9 ದಿನ ರಜೆ ನೀಡಿದರೂ ಒಟ್ಟು ಕಲಿಕಾ ದಿನಗಳ ಕೊರತೆ ಆಗದು. ಇದು ಮಕ್ಕಳ ಕಲಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸಮೀಕ್ಷೆಯನ್ನು ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ದೇವೇಗೌಡ ಅವರಂತಹ ನಾಯಕರು ವಿರೋಧಿಸಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಆರ್.ಅಶೋಕ, ಅಶ್ವತ್ಥನಾರಾಯಣ ಮತ್ತು ತೇಜಸ್ವಿ ಸೂರ್ಯ ಅಂತಹವರು ಸಮೀಕ್ಷೆಗೆ ಸಹಕರಿಸಬೇಡಿ ಎನ್ನುವುದು ಹೊಣೆಗೇಡಿತನ. ಅವರು ಯಾವ ಮುಖ ಇಟ್ಟುಕೊಂಡು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಾರೆ’ ಎಂದು ಪ್ರಶ್ನಿಸಿದರು.
‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನ ಉದ್ಯೋಗ ಸಲುವಾಗಿ ಬೇರೆ ದೇಶಗಳಲ್ಲಿ, ಬೇರೆ ಊರುಗಳಲ್ಲಿ ನೆಲೆಸಿರುವವರ ಪ್ರಮಾಣ ಹೆಚ್ಚು ಇದೆ. ಹಾಗಾಗಿ ಸಮೀಕ್ಷೆಯ ಗುರಿ ಸಾಧನೆಗೆ ಅಡಚಣೆ ಉಂಟಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.