ಮಂಗಳೂರು: ‘ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಇದೇ 16ರಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ‘ಶಕ್ತಿ ಫೆಸ್ಟ್’ ಹಮ್ಮಿಕೊಳ್ಳಲಾಗಿದೆ’ ಎಂದು ಶಕ್ತಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ ಕೆ. ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪಿ.ಯು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ, ಉತ್ಪನ್ನ ಬಿಡುಗಡೆ (ಶಾರ್ಕ್ ಟ್ಯಾಂಕ್), ರಂಗೋಲಿ (ವಿಷಯ: ನವರಾತ್ರಿ), ಮುಖವರ್ಣಿಕೆ (ವಿಷಯ: ಮಾದಕ ವ್ಯಸನದ ದುಷ್ಪರಿಣಾಮ), ಹೂಗುಚ್ಚ ತಯಾರಿ, ರೀಲ್ ತಯಾರಿ, ಭಾವಗೀತೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ಕುಣಿತ, ಪೋಸ್ಟರ್ ರಚನೆ (ವಿಷಯ: ಸೈಬರ್ ಭದ್ರತೆ), ಪೆನ್ಸಿಲ್ ಸ್ಕೆಚ್, ವಿಜ್ಞಾನ ಮಾದರಿ (ಪರಿಸರಸ್ನೇಹಿ ಆವಿಷ್ಕಾರ), ಬೀದಿ ನಾಟಕ (ವಿಷಯ: ಸಾಮಾಜಿಕ ಕಳಕಳಿ), ಭಾವಗೀತೆ ಹಾಗೂ ನಿಧಿ ಬೇಟೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನವಿದೆ’ ಎಂದು ತಿಳಿಸಿದರು.
‘ಶಿಕ್ಷಣ ಸಂಸ್ಥೆಯ ಒಂದು ತಂಡಕ್ಕೆ ಮಾತ್ರ ಅವಕಾಶ. ಒಬ್ಬ ವಿದ್ಯಾರ್ಥಿ ಗರಿಷ್ಠ ಎರಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಂಡದ ಸದಸ್ಯರ ಗರಿಷ್ಠ ಮಿತಿ 25. ಭಾಗವಹಿಸಲು ಆಯಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಅನುಮತಿ ಪತ್ರಕಡ್ಡಾಯ. ತಂಡವು ₹ 100 ಶುಲ್ಕ ಪಾವತಿಸಬೇಕು. ಇದೇ 11ರ ಒಳಗೆ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್ (Shakthi.edu.in) ನೋಡಬಹುದು. ಇಮೇಲ್ ಮೂಲಕ (fest@shakthi.edu.in) ಅಥವಾ ಮೊಬೈಲ್ 7975296917, 7259125021 ಸಂಪರ್ಕಿಸಬಹುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶಮೂರ್ತಿ ಎಚ್., ಶಕ್ತಿ ವಸತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಬಿತಾ ಸೂರಜ್, ಕಾರ್ಯಕ್ರಮದ ಸಂಯೋಜಕಿ ಸಬಿತಾ ಕಾಮತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.