
ಮಂಗಳೂರು: ಇಲ್ಲಿಯ ಶಕ್ತಿ ಪದವಿಪೂರ್ವ ಕಾಲೇಜು 2026–27ನೇ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ‘ಶಕ್ತಿ ಪ್ರತಿಭಾ’ ಸ್ಕಾಲರ್‌ಷಿಪ್ ಪರೀಕ್ಷೆಯನ್ನು ನ.9, 16, 23 ಹಾಗೂ 30ರಂದು ಆಯೋಜಿಸಿದೆ.
ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದೆ. ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿ (ಬೋರ್ಡ್, ಸಿಬಿಎಸ್‍ಇ, ಐಸಿಎಸ್‍ಇ) ವ್ಯಾಸಂಗ ಮಾಡುತ್ತಿರಬೇಕು. 9 ಮತ್ತು 10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.
ಸ್ಕಾಲರ್‌ಷಿಪ್ ಪರೀಕ್ಷೆ ಮತ್ತು ಪರೀಕ್ಷಾ ಮಂಡಳಿ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶ ಇದೆ. ಶಕ್ತಿ ಪಿಯು ಕಾಲೇಜಿಗೆ ಪ್ರವೇಶ ಪಡೆಯುವ 150 ವಿದ್ಯಾರ್ಥಿಗಳಿಗೆ ಒಟ್ಟು ₹1 ಕೋಟಿ ಮೊತ್ತದ ಸ್ಕಾಲರ್‌ಷಿಪ್ ನೀಡಲಾಗುವುದು. ಮಾಹಿತಿಗೆ ವೆಬ್‌ಸೈಟ್ shakthi.edu.in ಅಥವಾ ಮೊ. 9686000046 ಸಂಪರ್ಕಿಸಬಹುದು ಎಂದು ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.