ADVERTISEMENT

ಪ್ರವೀಣ್ ಕುಟುಂಬಕ್ಕೆ ಶಿವಗಿರಿ ಮಠ, ನಿಪ್ಪಾಣಿ ಮಠದ ಸ್ವಾಮೀಜಿಗಳಿಂದ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 7:53 IST
Last Updated 29 ಜುಲೈ 2022, 7:53 IST
   

ಬೆಳ್ಳಾರೆ: ಕೇರಳದ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮಠದ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ ಅವರು ಪ್ರವೀಣ್ ನೆಟ್ಟಾರು ಅವರ ಮಬೆಗೆ ಶುಕ್ರವಾರ ಭೇಟಿ ನೀಡಿ, ಬಂಧುಗಳಿಗೆ ಸಾಂತ್ವನ ಹೇಳಿದರು.

'ನಿಮ್ಮ ದುಃಖ ನಮಗೆ ಅರ್ಥವಾಗುತ್ತದೆ. ಸಮಾಜ ನಿಮ್ಮ ಹಿಂದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ' ಎಂದು ಶಿವಗಿರಿ ಮಠದ ಸ್ವಾಮೀಜಿ ಸ್ಥೈರ್ಯ ತುಂಬಿದರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಗಿರಿ ಮಠದ ಸ್ವಾಮೀಜಿ, 'ಸರ್ವಸಂಗ ಪರಿತ್ಯಾಗಿಗಳಾದ ನಮಗೇ ಇವರ ಕುಟುಂಬದ ಸ್ಥಿತಿ ಕಂಡು ಬೇಸರವಾಗುತ್ತದೆ. ಯಾವ ಸಮಾಜದವರಿಗೂ, ಯಾವ ಧರ್ಮದವರಿಗೂ ಇಂತಹ ಸ್ಥಿತಿ ಬರಬಾರದು' ಎಂದರು.

'ಯುವಜನರು ಇಂತಹ ವಿಚಾರದಲ್ಲಿ ಎಚ್ಚರ ವಹಿಸಬೇಕು. ರಾಜಕೀಯಕ್ಕೆ ಹೋಗಬಾರದು ಎನ್ನುವುದಿಲ್ಲ. ಆದರೆ, ಅದು ಕರ್ತವ್ಯ ಎಷ್ಟಿದೆಯೋ ಅಷ್ಟಕ್ಕೆ ಮಾತ್ರ ಸೀಮಿತವಾಗಬೇಕು' ಎಂದು ಕಿವಿಮಾತು ಹೇಳಿದರು.

ADVERTISEMENT

'ನಾವೇ ಆರಿಸಿದ ಸರ್ಕಾರವಿದು. ಇದನ್ನು ಈಗ ದೂರಿ ಪ್ರಯೋಜನವಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಇಂತಹ ಕೃತ್ಯ ತಡೆಯಲು ಜ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.