
ಉಜಿರೆ (ದಕ್ಷಿಣ ಕನ್ನಡ): ಶಿವರಾತ್ರಿ ಪ್ರಯುಕ್ತ ನೂರಾರು ಭಕ್ತರು ಬೆಂಗಳೂರಿನಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದರು.
ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಮತ್ತು ಬಳಗ (80 ಸ್ವಯಂಸೇವಕರು), ಯಲಹಂಕದ ತಿಮ್ಮಾ ರೆಡ್ಡಿ ಮತ್ತು ಬಳಗ (50 ಸ್ವಯಂಸೇವಕರು) ಆನೇಕಲ್ ಮುನಿರೆಡ್ಡಿ ಮತ್ತು ಬಳಗ (50 ಸ್ವಯಂಸೇವಕರು), ಹೊಸೂರು ರಾಜ ರೆಡ್ಡಿ ಮತ್ತು ಬಳಗ (50 ಸ್ವಯಂಸೇವಕರು), ಆನೇಕಲ್ ಗೋಪಾಲರೆಡ್ಡಿ ಮತ್ತು ಬಳಗ (50 ಸ್ವಯಂಸೇವಕರು), ಮಾಲೂರು ರಾಮಕೃಷ್ಣ ಮತ್ತು ಬಳಗ (30 ಸ್ವಯಂಸೇವಕರು), ಸರ್ಜಾಪುರ ಬಸವರಾಜ ಮತ್ತು ಬಳಗ (50 ಸ್ವಯಂಸೇವಕರು), ನಾಗರಬಾವಿ ಪುಷ್ಪಮಂಜು ಬಳಗ (50 ಸ್ವಯಂಸೇವಕರು), ಶ್ರೀಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಬೀರೂರು (25 ಸ್ವಯಂಸೇವಕರು), ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ, ನಾಗರಬಾವಿ (100 ಸ್ವಯಂಸೇವಕರು), ಕೃಷ್ಣ ರೆಡ್ಡಿ ಆನೇಕಲ್ (100 ಸ್ವಯಂಸೇವಕರು), ಶ್ರೀಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ, ಮಲ್ಲೇಶ್ವರ (50 ಸ್ವಯಂಸೇವಕರು) ಸೇರಿ 12 ತಂಡಗಳಲ್ಲಿ 635 ಸ್ವಯಂಸೇವಕರು ಅನ್ನದಾಸೋಹ ಸೇವೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.