ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹಗಳನ್ನು ಹೂತುಹಾಕಿಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ನೇತ್ರಾವತಿ ಸ್ನಾನಘಟ್ಟದ ಬಳಿ ಮಂಗಳವಾರ ಭೂಮಿ ಅಗೆಯುವಾಗ ಸಾಕ್ಷಿ ದೂರುದಾರ ಹಾಗೂ ಎಸ್ ಐ ಟಿ ಅಧಿಕಾರಿಗಳು ಹಾಜರಿದ್ದರು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ದೂರನ್ನು ಹಿಂಪಡೆಯುವಂತೆ ಸಾಕ್ಷಿ ದೂರುದಾರನಿಗೆ ಎಸ್ಐಟಿ ತಂಡದಲ್ಲಿರುವ ಅಧಿಕಾರಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.
ಎಸ್‌ಐಟಿಗೆ ಕಳುಹಿಸಿದ ಇ–ಮೇಲ್‌ನಲ್ಲಿ ವಕೀಲರಾದ ಅನನ್ಯಾ ಗೌಡ, ‘ನಮ್ಮ ಕಕ್ಷಿದಾರನಿಗೆ ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಆಗಸ್ಟ್ 1ರಂದು ಬೆದರಿಕೆ ಒಡ್ಡಿದ್ದಾರೆ. ನೀನು ಇದರ ಭೀಕರ ಪರಿಣಾಮವನ್ನು ಎದುರಿಸುತ್ತೀಯ. ನಿನ್ನನ್ನೇ ವಶಕ್ಕೆ ಪಡೆಯುತ್ತೇವೆ. ದೀರ್ಘ ಕಾಲದವರೆಗೆ ನೀನು ಬಂಧನಕ್ಕೂ ಒಳಗಾಗಬಹುದು ಎಂದು ಬೆದರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಆ ಅಧಿಕಾರಿಯನ್ನು ತಕ್ಷಣ ತನಿಖೆಯಿಂದ ಹೊರಗಿಡಬೇಕು. ನಮ್ಮ ಕಕ್ಷಿದಾರ ಮುಕ್ತವಾಗಿ ಹಾಗೂ ನಿರ್ಭಯವಾಗಿ ತನಿಖೆಗೆ ಸಹಕರಿಸಲು ಈ ಕ್ರಮದ ಅಗತ್ಯ ಇದೆ' ಎಂದು ಅವರು ತಿಳಿಸಿದ್ದಾರೆ.
ಈ ದೂರಿನ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.