ADVERTISEMENT

ಸಿಟಿಗುಡ್ಡೆ : ಧರೆ ಕುಸಿದು ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:44 IST
Last Updated 7 ಜುಲೈ 2022, 4:44 IST

ಪುತ್ತೂರು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಧರೆ ಕುಸಿದು ಮನೆಯೊಂದಕ್ಕೆ ಹಾನಿಯಾದ ಘಟನೆ ಬುಧವಾರ ಪುತ್ತೂರು ನಗರದ ಹೊರವಲಯದ ನೆಹರೂ ನಗರ ಸಮೀಪದ ಸಿಟಿಗುಡ್ಡೆಯಲ್ಲಿ ನಡೆದಿದೆ.
ಸಿಟಿಗುಡ್ಡೆ ನಿವಾಸಿ ದುರ್ಗಾ ಪ್ರಸಾದ್ ಮನೆಯ ಹಿಂಬದಿಯ ಧರೆಯ ಮಣ್ಣು ಕುಸಿದು ಮನೆಯ ಬದಿಗೆ ಬಿದ್ದಿದೆ. ಮನೆಯ ಗೋಡೆಗೆ ಹಾನಿಯಾಗಿದೆ. ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬೀಳತೊಡಗಿದ್ದು, ರಸ್ತೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರು ಭಾಗದ ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಪ್ರದೇಶಕ್ಕೆ ಮಳೆನೀರು ನುಗ್ಗಿದು, ಅಲ್ಲಿನ ರಸ್ತೆಗಳು ತೋಡಾಗಿ ಮಾರ್ಪಟ್ಟಿವೆ.

ತಾತ್ಕಾಲಿಕ ಪರಿಹಾರ:ಪುತ್ತೂರು ನಗರಸಭೆ ವ್ಯಾಪ್ತಿಯ ಬೊಳುವಾರು ಕರ್ಮಲದಲ್ಲಿ ವಿಶ್ವಕರ್ಮ ಸಭಾಭವನಕ್ಕೆ ಮತ್ತು ನಗರಸಭೆಯ ನೀರು ಸರಬರಾಜಿನ ಟ್ಯಾಂಕ್‌ ಹೋಗುವ ರಸ್ತೆಯ ಬದಿಯಲ್ಲಿ ಮಣ್ಣು ಕುಸಿತಗೊಂಡ ಸ್ಥಳಕ್ಕೆ ಪ್ಲಾಸ್ಟಿಕ್ ಟಾರ್ಪಲ್‌ ಹೊದಿಕೆಯ ಮೂಲಕ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಸಂತೋಷ್ ಬೊಳುವಾರು ಮತ್ತು ದಯಾಕರ್ ಅವರು ಮಣ್ಣು ಕುಸಿದ ಸ್ಥಳಕ್ಕೆ ಟಾರ್ಪಲ್‌ ಹೊದಿಸುವ ಮೂಲಕ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.