ADVERTISEMENT

ಎಂಆರ್‌ಪಿಎಲ್‌ನಿಂದ ಶಾಲೆಗೆ ಬಸ್‌ ದೇಣಿಗೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 13:57 IST
Last Updated 21 ಸೆಪ್ಟೆಂಬರ್ 2023, 13:57 IST
ಎಂಆರ್‌ಪಿಎಲ್‌ ಸಂಸ್ಥೆ ನೀಡಿರುವ ಬಸ್‌
ಎಂಆರ್‌ಪಿಎಲ್‌ ಸಂಸ್ಥೆ ನೀಡಿರುವ ಬಸ್‌   

ಮಂಗಳೂರು: ಇಲ್ಲಿನ ಎಂಆರ್‌ಪಿಎಲ್‌ ಸಂಸ್ಥೆಯು ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಿಂದ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಮಕ್ಕಳ ಎರಡು ಶಾಲೆಗಳಿಗೆ ಒಟ್ಟು ₹45.41 ಲಕ್ಷ ಮೊತ್ತದ ಎರಡು ಶಾಲಾ ಬಸ್‌ಗಳನ್ನು ದೇಣಿಗೆಯಾಗಿ ನೀಡಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಚೇತನಾ ವಿಶೇಷ ಮಕ್ಕಳ ಶಾಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಬಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ 165 ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT