ADVERTISEMENT

ತೊಕ್ಕೊಟ್ಟು: ಮನೆಯಿಂದ ಚಿನ್ನಾಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 7:32 IST
Last Updated 19 ಮಾರ್ಚ್ 2021, 7:32 IST
ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ₹ 5000 ನಗದು ಕಳವು ಮಾಡಲಾಗಿದೆ.
ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ₹ 5000 ನಗದು ಕಳವು ಮಾಡಲಾಗಿದೆ.   

ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ₹ 5000 ನಗದು ಕಳವು ಮಾಡಲಾಗಿದೆ.

ತೊಕ್ಕೊಟ್ಟು ಒಳಪೇಟೆ ಓವರ್ ಬ್ರಿಡ್ಜ್ ಬಳಿಯ ಜಯರಾಜ್ ಅವರ ಮನೆಯಲ್ಲಿ ಗುರುವಾರ ಮಧ್ಯರಾತ್ರಿ ಕಳವು ನಡೆದಿದೆ. ಮನೆಮಂದಿ ಮಲಗಿದ್ದ ಸಂದರ್ಭದಲ್ಲಿ ಹೆಂಚು ತೆಗೆದು ಒಳನುಗ್ಗಿರುವ ಕಳ್ಳರು ಕಳವು ಮಾಡಿದ್ದಾರೆ.

ಸದ್ದು ಕೇಳಿದ ಮನೆಯಲ್ಲಿದ್ದ ಮಹಿಳೆಯೊಬ್ಬರು ಕೂಗಿಕೊಂಡಿದ್ದು, ಕಳ್ಳರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.