ADVERTISEMENT

ಸುಬ್ರಹ್ಮಣ್ಯ | ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2023, 11:30 IST
Last Updated 24 ಮೇ 2023, 11:30 IST
ಕೆಎಸ್‌ಆರ್‌ಟಿಸಿ ಬಸ್‌ –ಸಾಂದರ್ಭಿಕ ಚಿತ್ರ
ಕೆಎಸ್‌ಆರ್‌ಟಿಸಿ ಬಸ್‌ –ಸಾಂದರ್ಭಿಕ ಚಿತ್ರ   

ಮಂಗಳೂರು: ‌ಸುಬ್ರಹ್ಮಣ್ಯದಿಂದ ಬೆಳಗಿನ ಜಾವ ಪಂಜ, ಕಾಣಿಯೂರು, ಪುತ್ತೂರು ಕೇಂದ್ರ ಸ್ಥಾನಕ್ಕೆ ತಲುಪುವ ಸರ್ಕಾರಿ ಬಸ್‌ನಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸುಬ್ರಹ್ಮಣ್ಯದಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ಬಸ್ಸಿನ ನಂತರ 8 ಗಂಟೆಗೆ ಯಾವುದೇ ಬಸ್‌ ಇಲ್ಲ. 8 ಗಂಟೆಯ ಬಸ್‌ ಒಂದೊಂದು ಬಾರಿ ಸುಬ್ರಹ್ಮಣ್ಯ ನಿಲ್ದಾಣದಿಂದ 8.10ಕ್ಕೆ ಹೊರಡುತ್ತದೆ. ಅದು ಬಿಟ್ಟರೆ 8.30ಕ್ಕೆ ಬಸ್‌ ಇದೆ.

ಬೆಳಿಗ್ಗೆ 6.30ರ ಬಸ್‌ ಹೆಚ್ಚೆಂದರೆ ಪಂಜ ನಿಂತಿಕಲ್ಲು ತಲುಪುತ್ತಿದ್ದಂತೆ ಭರ್ತಿಯಾಗುತ್ತದೆ. ನಂತರ ಆ ಬಸ್‌ ನಿಲ್ಲಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಸುಬ್ರಹ್ಮಣ್ಯದ ವಿದ್ಯಾರ್ಥಿನಿ ಅನನ್ಯ ಎಚ್‌. ದೂರಿದ್ದಾರೆ.

ADVERTISEMENT

ಸುಬ್ರಹ್ಮಣ್ಯದಿಂದ ಬೆಳಿಗ್ಗೆ 7.30ಕ್ಕೆ ಪುತ್ತೂರಿಗೆ ಬಸ್‌ ಬಿಟ್ಟರೆ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ. ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಎರಡು ಗಂಟೆ ಪ್ರಯಾಣದ ಅವಧಿ ಇದೆ. ಈಗಿರುವ ಬಸ್‌ಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಗಮನ ಹಿರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.