ADVERTISEMENT

ಪುತ್ತೂರು: ಅಂಬಿಕಾ ವಿದ್ಯಾಲಯದ ಶಾಲಾ ನಾಯಕರಾಗಿ ಸುಧನ್ವ, ನಾಯಕಿ ರಕ್ಷಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 12:31 IST
Last Updated 6 ಜೂನ್ 2025, 12:31 IST
ಸುಧನ್ವ
ಸುಧನ್ವ   

ಪುತ್ತೂರು: ಇಲ್ಲಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶಾಲಾ ನಾಯಕನಾಗಿ 10ನೇ ತರಗತಿಯ ವಿದ್ಯಾರ್ಥಿ ಸುಧನ್ವ ಸುದರ್ಶನ್ ಮತ್ತು ನಾಯಕಿಯಾಗಿ ರಕ್ಷಾ ಎಸ್. ಎಸ್ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆ ನಡೆಯಿತು. ಗೃಹಮಂತ್ರಿಯಾಗಿ 9ನೇ ತರಗತಿಯ ಸಾತ್ವಿಕ್ ಜಿ, ಶಿಸ್ತು ಪಾಲನಾ ಮಂತ್ರಿಯಾಗಿ ವಂಶಿಕಾ ಬಿ.ರೈ, ಕ್ರೀಡಾ ಮಂತ್ರಿಯಾಗಿ ಭಾರ್ಗವ್ ಎಸ್. ರೈ ಆಯ್ಕೆಯಾದರು. 8ನೇ ತರಗತಿಯ ಶ್ರೀನಿಕ್ ಎಸ್. ಆಚಾರ್ಯ ಶಿಕ್ಷಣ ಮಂತ್ರಿಯಾಗಿ, ಅನ್ವಿತಾ ಎಸ್ ಸಾಂಸ್ಕೃತಿಕ ಮಂತ್ರಿಯಾಗಿ, 7ನೇ ತರಗತಿಯ ಹರ್ಷಲ್ ಡಿ.ರೈ ಸಂವಹನ ಮಂತ್ರಿಯಾಗಿ, ಸಾನ್ವಿ ಜಿ ಆರೋಗ್ಯಮಂತ್ರಿಯಾಗಿ, ಸುಧನ್ವ ಕೆ ನೀರಾವರಿ ಮಂತ್ರಿಯಾಗಿ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT