
ಪ್ರಜಾವಾಣಿ ವಾರ್ತೆಮಂಗಳೂರು: ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಸುಹಾಸ್ ಶೆಟ್ಟಿ ಮೇತದೇಹವನ್ನು ಅವರ ಊರಾದ ಕಾರಿಂಜಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ.
ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಮೃತದೇಹ ಊರಿನ ಕಡೆಗೆ ಹೊರಟಿದ್ದು, ಪಡೀಲ್‌ನಲ್ಲಿ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಸುಹಾಸ್ ಶೆಟ್ಟಿ ಮೃತ ದೇಹಕ್ಕೆ ಗೌರವ ಸಲ್ಲಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಾಹನ ಸಾಗುತ್ತಿದೆ. ರಸ್ತೆ ಬದಿಯಲ್ಲಿ ಜನರು ನಿಂತು ವೀಕ್ಷಿಸುತ್ತಿದ್ದಾರೆ.
ಪುದು ಗ್ರಾಮದ ಬೆಂಜನಪದವು ಪದವು ಬಳಿಯೂ ಸ್ಥಳೀಯರು ಮೃತದೇಹಕ್ಕೆ ಗೌರವ ಸಲ್ಲಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.