ಉಳ್ಳಾಲ: ಮಹಿಳಾ ಸಂಘಟನೆಗಳು ಮಕ್ಕಳಲ್ಲಿ ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಶಿಬಿರಗಳ ಮೂಲಕ ಬೆಳೆಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಉಷಾ ಹೇಳಿದರು.
ಭ್ರಾಮರಿ ಮಹಿಳಾ ಮಂಡಲದ ವಾರ್ಷಿಕೋತ್ಸವ, ಮೂರು ದಿನದ ಚಿಣ್ಣರ ಚಾವಡಿ 2.0 ಬೇಸಿಗೆ ಶಿಬಿರಕ್ಕೆ ಮುನ್ನೂರು ಸುಭಾಷನಗರದ ಸಮುದಾಯ ಭವನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲ ಮಹಮದ್ ಅಸ್ಗರ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೈಕೆ, ಭದ್ರತೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿದ ಅಧ್ಯಾಪಕಿ ಗೀತಾ ಸಲ್ದಾನ್ಹ, ಬ್ಯಾಡ್ಮಿಂಟನ್‌ನಲ್ಲಿ ಗಿನ್ನೆಸ್ ದಾಖಲೆ ಮಾಡಿದ ಕಾವ್ಯಾ, ಮುನ್ನೂರು ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದ ರವೀಂದ್ರ ರಾಜ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಮುನ್ನೂರು ಪಿಡಿಒ ಶ್ರೀಕಾಂತ್ ಎಂ., ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಭಾಗ್ಯರಾಜ್, ದುರ್ಗಾ ವಾಹಿನಿ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಶಾರದಾ ನಾಯರ್, ಸುನೀತಾ ನಾಯಕ್, ಗೌರವಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಶೃತಿ ಮೀನಾಕ್ಷಿ ಭಾಗವಹಿಸಿದ್ದರು.
ಪವಿತ್ರ ನಿರೂಪಿಸಿದರು. ಚಂದ್ರಕಲಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.