ADVERTISEMENT

ಬಂಟ್ವಾಳ: ಆಧಾರ ಶಿಲಾಧಿ ಷಢಾಧಾರ ಪ್ರತಿಷ್ಠೆ

ಅಜ್ಜಿಬೆಟ್ಟು ಕಾಪು: ಉಮಾಮಹೇಶ್ವರ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:27 IST
Last Updated 2 ಡಿಸೆಂಬರ್ 2025, 7:27 IST
ಬಂಟ್ವಾಳ ತಾಲ್ಲೂಕಿನ ಅಜ್ಜಿಬೆಟ್ಟು ಕಾಪು ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಷಢಾಧಾರ ಪ್ರತಿಷ್ಠೆ ಭಾನುವಾರ ನಡೆಯಿತು
ಬಂಟ್ವಾಳ ತಾಲ್ಲೂಕಿನ ಅಜ್ಜಿಬೆಟ್ಟು ಕಾಪು ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಷಢಾಧಾರ ಪ್ರತಿಷ್ಠೆ ಭಾನುವಾರ ನಡೆಯಿತು   

ಬಂಟ್ವಾಳ: ಇಲ್ಲಿನ ಅಜ್ಜಿಬೆಟ್ಟು ಗ್ರಾಮದ ಕಾಪು ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ನೂತನ ಗರ್ಭಗುಡಿ ನಿರ್ಮಾಣಕ್ಕೆ ಆಧಾರ ಶಿಲಾಧಿ ಷಢಾಧಾರ ಪ್ರತಿಷ್ಠಾಪನೆ ಭಾನುವಾರ ನಡೆಯಿತು.

ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಇಷ್ಟಿಕಾ ಗರ್ಭನ್ಯಾಸ ಹೋಮ ಸಹಿತ ಷಢಾಧಾರ ಪ್ರತಿಷ್ಠಾಪನೆ ನೆರವೇರಿಸಿದರು. ಭಕ್ತರು ಚಿನ್ನ, ಬೆಳ್ಳಿ, ನಾಣ್ಯ ಕಾಣಿಕೆ ಸಮರ್ಪಿಸಿದರು. ಮೆರವಣಿಗೆಗೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಚಾಲನೆ ನೀಡಿದರು. ಮುಖಂಡ ಬಿ.ರಮಾನಾಥ ರೈ ಮಾತನಾಡಿದರು.

ಪ್ರಮುಖರಾದ  ಅಮ್ಮು ರೈ ಹರ್ಕಾಡಿ, ಪ್ರಕಾಶ್ಚಂದ್ರ ಅಳ್ವ, ಜಯಪ್ರಕಾಶ್ ಶೆಟ್ಟಿ ಬುಳೇರಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಪ್ರಸನ್ನ ಕಕ್ಕನ್ನಾಯ, ಸುರೇಶ್ ಶೆಟ್ಟಿ ನಂದಿಲ, ನವೀನಚಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಕಿಶೋರ್ ಕುಮಾರ್ ಶೆಟ್ಟಿ ಕುಂಡೋಳಿ, ಸುಧೀರ್ ಕುಮಾರ್ ಶೆಟ್ಟಿ ಕುಂಡೋಳಿ, ಸುಂದರ ಶೆಟ್ಟಿ ಬಜೆ, ಕೆ.ಮಾಯಿಲಪ್ಪ ಸಾಲ್ಯಾನ್, ವಿವೇಕಾನಂದ ಪೂಜಾರಿ ಕೌಡೋಡಿ, ಕಮಲ್ ಶೆಟ್ಟಿ, ಯೋಗೀಶ್ ಕಳಸಡ್ಕ, ಕಿಶೋರ್ ಕುಮಾರ್ ನಾಯರ್ ಕುಮೇರು, ಪ್ರವೀಣ ಗಟ್ಟಿ ಬಸ್ತಿಕೋಡಿ, ವನಿತಾ, ಡಾ.ರವಿ ಎನ್.ಶರ್ಮ, ಡಾ.ರಾಮಕೃಷ್ಣ ಎಸ್., ರಮೇಶ್ ಶೆಟ್ಟಿ ಬಜೆ, ಜಯಾನಂದ ಶೆಟ್ಟಿ ನೆಕ್ಕಿತರವು, ಮೋಹನ್ ಶೆಟ್ಟಿ ನರ್ವಲ್ದಡ್ಡ, ನಾಗರಾಜ ಶೆಟ್ಟಿ, ಪ್ರದೀಪ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ ವಾಮದಪದವು, ರಮೇಶ್ ಶೆಟ್ಟಿ ವಾಮದಪದವು, ಡೊಂಬಯ್ಯ ಶೆಟ್ಟಿ, ಆನಂದ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಸತೀಶ್ ಶೆಟ್ಟಿ ಪಡೀಲ್ ಬೆಟ್ಟು, ಮಹಾಲಿಂಗ ಶರ್ಮ, ಪುನೀತ್ ಶೆಟ್ಟಿ, ಯಶ್ವಿನ್ ಶೆಟ್ಟಿ, ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಪ್ರದೀಪ್ ಶೆಟ್ಟಿ, ಆನಂದ ಮೂಲ್ಯ, ಮಮತಾ ಗಟ್ಟಿ, ಪದ್ಮಾವತಿ ಶೆಟ್ಟಿ, ಸುಂದರ ನಾಯ್ಕ್, ಚಂದಪ್ಪ ಪೂಜಾರಿ ಆಗಮೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.