
ಬೆಳ್ತಂಗಡಿ: ಬಂದಾರು ಗ್ರಾಮದ ಪಿಲತ್ತಿಮಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ನಾಣ್ಯಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಕುರಿತ ಸಮಾಲೋಚನಾ ಸಭೆ ನಡೆಯಿತು.
ಶಾಸಕ ಹರೀಶ್ ಪೂಂಜ ಮಾತನಾಡಿ, 'ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ₹
25 ಲಕ್ಷ ಅನುದಾನ ಮಂಜೂರಾಗಿದ್ದು, ತಾಂತ್ರಿಕ ಕಾರಣಕ್ಕಾಗಿ ಅನುದಾನವನ್ನು ವಿನಿಯೋಗಿಸಲು ಸಾಧ್ಯವಾಗಿಲ್ಲ. ಕೂಡಲೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡಲ್ಲಿ ಮಂಜೂರಾದ ಅನುದಾನವನ್ನು ವಿನಿಯೋಗಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಆಡಳಿತ ಸಮಿತಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು' ಎಂದು ಸಲಹೆ ನೀಡಿದರು.
'ದೇವಸ್ಥಾನಕ್ಕೆ ಬರುವಾಗ ರಾಜಕೀಯವನ್ನು ಹೊರಗಿಟ್ಟು ಬರಬೇಕು. ಇಲ್ಲಿ ಬಂದ ಮೇಲೆ ನಾವೆಲ್ಲರೂ ದೇವರ ಜಾತಿ, ದೇವರ ಪಕ್ಷ. ಅವನು ಸ್ಪೃಶ್ಯ, ಇವನು ಅಸ್ಪೃಶ್ಯ ಎಂಬುದನ್ನು ಬಿಟ್ಟು ಎಲ್ಲರೂ ಒಂದಾಗಿ ದುಡಿಯಬೇಕು. ನಾನೂ ಇಲ್ಲಿ ಭಕ್ತನಾಗಿದ್ದು ನನ್ನನ್ನೂ ಶಾಸಕನೆಂದು ಕರೆಯಬೇಡಿ. ಇನ್ನಷ್ಟು ಹೆಚ್ಚಿನ ಅನುದಾನವನ್ನು ಒದಗಿಸಲು ಭಕ್ತನಾಗಿ ಪ್ರಾಮಾಣಿಕವಾಗಿ ಯತ್ನಿಸುವೆ' ಎಂದರು.
ಅನುವಂಶಿಕ ಆಡಳಿತ ಮೊಕ್ತೇಸರ ಸೂರ್ಯ ನಾರಾಯಣ ಕುಡುಮತ್ತಾಯ, ದೇಜಪ್ಪ ಗೌಡ ಪೊಯ್ಯೋಳೆ , ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ, ಮಿತ್ತಬಾಗಿಲು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ, ಲಿಂಗಪ್ಪ ಗೌಡ ಪೊಯ್ಯೋಳೆ, ಪದ್ಮುಂಜ, ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಿ.ಸಿ.ಟ್ರಸ್ಟ್ ಮೇಲ್ವಿಚಾರಕಿ ಶಿಲ್ಪಾ, ಒಕ್ಕೂಟದ ಅಧ್ಯಕ್ಷೆ ವಿಜಯಾ , ಧರ್ಣಪ್ಪ ಗೌಡ ಬಾನಡ್ಕ, ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ, ನಿರ್ದೇಶಕರಾದ ಪ್ರಭಾಕರ ಗೌಡ, ಉದಯ ಕುಮಾರ್ ಬಿ.ಕೆ.ಮುಂತಾದವರು ಹಾಜರಿದ್ದರು.
ರಂಜನ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು. ಪ್ರೀತಮ್ ಸ್ವಾಗತಿಸಿ, ಗಣೇಶ್ ಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.