ಮಂಗಳೂರು: ಲೇಖಕ ಸಜಿ ಎಂ. ನರಿಕುಂಞ ಅವರ ‘ವಾಕ್’ ಮಲೆಯಾಳ ಕೃತಿಯ ಅನುವಾದಿತ ಕನ್ನಡ ಪುಸ್ತಕ ‘ಮಾತು ಎಂಬ ವಿಸ್ಮಯ’ವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಂಗಳವಾರ ಇಲ್ಲಿ ಬಿಡುಗಡೆಗೊಳಿಸಿದರು.
‘ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದಿದರೆ ಬರಹಗಾರರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕು. ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಹೆಚ್ಚಬೇಕು’ ಎಂದರು.
ಅನುವಾದಕಿ ಮೀನಾಕ್ಷಿ ರಾಮಚಂದ್ರ ಮಾತನಾಡಿ, ‘ಮಾತು ಎಂಬ ವಿಸ್ಮಯ’ ಕೃತಿ ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತಿನ ಮೇಲೆ ಹಿಡಿತವಿರಬೇಕು, ಜಾಗರೂಕತೆಯಿಂದ ಮಾತನಾಡಬೇಕು. ಸಂಬಂಧವನ್ನು ಉಳಿಸುವ, ಬೆಳೆಸುವ ಶಕ್ತಿ ಮಾತಿಗೆ ಇದೆ. ಬದುಕನ್ನು ರೂಪಿಸಿಕೊಳ್ಳಲು ಮಾದರಿಯಾಗಿರುವ ಸಂದೇಶ ಈ ಕೃತಿಯಲ್ಲಿದೆ. ಈ ಲೇಖಕರ ಇನ್ನಷ್ಟು ಕೃತಿಗಳನ್ನು ಭಾಷಾಂತರಿಸುವ ಯೋಚನೆ ಇದೆ’ ಎಂದರು.
ಮಂಗಳೂರಿನ ಮೈರುಗ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ. ತುಳು ವರ್ಲ್ಡ್ ಫೌಂಡೇಷನ್ ನಿರ್ದೇಶಕ ರಾಜೇಶ್ ಆಳ್ವ ಬದಿಯಡ್ಕ, ಪ್ರಕಾಶಕ ಜಿ.ಕೆ. ಮೈರುಗ ಉಪಸ್ಥಿತರಿದ್ದರು. ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.