ADVERTISEMENT

ಸುಳ್ಯ: ಗಾಯಾಳುವನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಹಳ್ಳ ದಾಟಿಸಿದರು!

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 5:11 IST
Last Updated 16 ಜುಲೈ 2021, 5:11 IST
ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ಗಾಯಾಳು ವೃದ್ಧೆಯನ್ನು ಸ್ಥಳೀಯರು ಸ್ಟ್ರೆಚರ್ ಮೂಲಕ ಹಳ್ಳ ದಾಟಿಸಿದರು
ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ಗಾಯಾಳು ವೃದ್ಧೆಯನ್ನು ಸ್ಥಳೀಯರು ಸ್ಟ್ರೆಚರ್ ಮೂಲಕ ಹಳ್ಳ ದಾಟಿಸಿದರು   

ಸುಳ್ಯ: ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ಗಾಯಾಳು ದೇವಕಿ ಅವರನ್ನು ಸ್ಟ್ರೆಚರ್ ಮೂಲಕ ಎತ್ತಿಕೊಂಡು ಹಳ್ಳ ದಾಟಿಸುವ ಅನಿವಾರ್ಯತೆ ಎದುರಾಯಿತು.

70 ವರ್ಷದ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಮಂಗಳವಾರ ಮನೆಯ ಆವರಣ ದಲ್ಲಿ ಬಿದ್ದು, ಕಾಲಿಗೆ ಗಂಭೀರ ಗಾಯವಾಗಿತ್ತು. ಮನೆಯವರು ಸೇರಿಕೊಂಡು ಸ್ಟ್ರೆಚರ್ ಮೂಲಕ ಎತ್ತಿಕೊಂಡು ಹಳ್ಳ ದಾಟಿಸಿ, ಆಂಬುಲೆನ್ಸ್ ಮೂಲಕ
ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳ್ಳ ದಾಟುವ ವಿಡಿಯೊ ವೈರಲ್ ಆಗಿದೆ.

ಇಲ್ಲಿನ ಹತ್ತಕ್ಕೂ ಅಧಿಕ ಮನೆ ಯವರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಪರಿಸ್ಥಿತಿ ಇದೆ.

ADVERTISEMENT

ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಇತರೆ 12 ಮನೆಗಳಿವೆ. ಇಲ್ಲಿನ ನಿವಾಸಿಗಳು 60ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ನಡೆದು ಹೋಗಲು ವ್ಯವಸ್ಥೆ ಇದೆ. ಆದರೆ, ವಾಹನ ಸಂಚಾರಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕಾಲು ದಾರಿಯಲ್ಲಿ ಸಂಚರಿಸಿ, ಕಾಲುಸಂಕದ ಮೂಲಕ ಹಳ್ಳ ದಾಟುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.