ಬಂಧನ
ಕಾಸರಗೋಡು: ವಿವಿಧ ವಿಶ್ವವಿದ್ಯಾನಿಲಯಗಳ ನಕಲಿ ಪ್ರಮಾಣಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಮಾಡಿರುವ ಹೊಸದುರ್ಗ ಡಿವೈಎಸ್ಪಿ ಬಾಬು ನೇತೃತ್ವದ ಪೊಲೀಸರ ತಂಡವು ಮೂವರನ್ನು ಬಂಧಿಸಿದೆ.
ಹೊಸದುರ್ಗ ಕಡಪ್ಪುರಂ ನಿವಾಸಿ ಸಿಹಾಬ್(38), ಕೊವ್ವಲ್ ಪಳ್ಳಿ ನಿವಾಸಿ ಸಂತೋಷ್ ಕುಮಾರ್(45), ಕ್ಲಾಯಿಕಟ್ಟೆ ನಿವಾಸಿ ಸಿ.ರವೀಂದ್ರನ್(51) ಬಂಧಿತ ಆರೋಪಿಗಳು. ಪುದಿಯಕೋಟೆಯಲ್ಲಿರುವ ಸಂತೋಷ್ ಕುಮಾರ್ ಮಾಲೀಕತ್ವದ ನೆಟ್ ಫಾರ್ ಯೂ ಕೆಫೆ ಮತ್ತು ಶಿಹಾಬ್ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.