ADVERTISEMENT

ಸುಳ್ಯ: ಮಹಿಳಾ ಸಿಬ್ಬಂದಿಯಿಂದ ಹುಲಿ ಉಗುರು ಹೋಲುವ ಪೆಂಡೆಂಟ್‌ ವಶ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 19:49 IST
Last Updated 27 ಅಕ್ಟೋಬರ್ 2023, 19:49 IST
<div class="paragraphs"><p>– ಸಾಂದರ್ಭಿಕ ಚಿತ್ರ</p></div>

– ಸಾಂದರ್ಭಿಕ ಚಿತ್ರ

   

ಸುಳ್ಯ (ದಕ್ಷಿಣ ಕನ್ನಡ): ಇಲ್ಲಿನ ಪಟ್ಟಣ ಪಂಚಾಯಿತಿ ಸಿಬ್ಬಂದಿ ಶಶಿಕಲಾ ಅವರಿಂದ ಅಧಿಕಾರಿಗಳು ಹುಲಿ ಉಗುರು ಹೋಲುವ ಪೆಂಡೆಂಟ್‌ ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿ ಹುಲಿ ಉಗುರು ಹೋಲುವ ಪೆಂಡೆಂಟ್‌ ಧರಿಸಿದ್ದ ಚಿತ್ರ ಜಾಲ ತಾಣಗಳಲ್ಲಿ ಹರಿದಾಡಿತ್ತು.

‘ಇದು ಅಸಲಿಯಲ್ಲ. ಯಾರೋ ಮಾರಾಟ ಮಾಡಲು ಬಂದವರಿಂದ ನನ್ನ ತಾಯಿ ಖರೀದಿಸಿ, ಧರಿಸುತ್ತಿದ್ದರು. ಅನೇಕ ವರ್ಷಗಳಿಂದ ನಾನು ಧರಿಸುತ್ತಿದ್ದೆ. ಫೋಟೊ ಜಾಲತಾಣಗಳಲ್ಲಿ ಹರಿದಾಡಿತ್ತು. ಅಧಿಕಾರಿಗಳ ಸೂಚನೆಯಂತೆ ವಲಯ ಅರಣ್ಯಾಧಿಕಾರಿ

ADVERTISEMENT

ಕಚೇರಿಗೆ ತೆರಳಿ ಅದನ್ನು ಕೊಟ್ಟು ಬಂದಿದ್ದೇನೆ’ ಎಂದು ಶಶಿಕಲಾ ಪ್ರತಿಕ್ರಿಯಿಸಿದ್ದಾರೆ.

‘ಪೆಂಡೆಂಟ್‌ನ ಪರಿಶೀಲನೆಗೆ ಪ್ರಯೋಗಾಲಯದಲ್ಲಿ ಕಳುಹಿಸಿದೆ. ಅಸಲಿ ಹುಲಿ ಉಗುರಿನದ್ದಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.