ADVERTISEMENT

ಉಡುಪಿ- ಬಾರ್ಕೂರು ನಡುವೆ ಹಳಿ ಮೇಲೆ ಬಿದ್ದ ಮರ: ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 9:27 IST
Last Updated 24 ಜುಲೈ 2024, 9:27 IST
<div class="paragraphs"><p>ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಭಟ್, ಹಾಗೂ ಮುಖ್ಯ ಲೊಕೊ ಪೈಲಟ್‌ ಇನ್ಸ್‌ಪೆಕ್ಟರ್ ಬಿನು ಕೆ. ಅವರು ಪುರುಷೋತ್ತಮ ಹಾಗೂ ಮಂಜುನಾಥ ನಾಯ್ಕ್ ಅವರಿಗೆ ನಗದು ಬಹುಮಾನವನ್ನು ಸುರತ್ಕಲ್ ರೈಲು ನಿಲ್ದಾಣದಲ್ಲಿ ಹಸ್ತಾಂತರಿಸಿದರು.</p></div>

ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಭಟ್, ಹಾಗೂ ಮುಖ್ಯ ಲೊಕೊ ಪೈಲಟ್‌ ಇನ್ಸ್‌ಪೆಕ್ಟರ್ ಬಿನು ಕೆ. ಅವರು ಪುರುಷೋತ್ತಮ ಹಾಗೂ ಮಂಜುನಾಥ ನಾಯ್ಕ್ ಅವರಿಗೆ ನಗದು ಬಹುಮಾನವನ್ನು ಸುರತ್ಕಲ್ ರೈಲು ನಿಲ್ದಾಣದಲ್ಲಿ ಹಸ್ತಾಂತರಿಸಿದರು.

   

ಮಂಗಳೂರು: ಬಾರ್ಕೂರು- ಉಡುಪಿ ನಡುವಿನ ಹಳಿ ಮೇಲೆ ಭಾರಿ ಗಾತ್ರದ ಮರವೊಂದು ಬಿದ್ದಿದ್ದು, ಲೊಕೊ ಪೈಲಟ್‌ ಹಾಗೂ ಸಹಾಯಕ ಲೊಕೊ ಪೈಲಟ್‌ ತೋರಿದ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ.

ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಬಾರ್ಕೂರು - ಉಡುಪಿ ನಡುವೆ ಕಿ‌.ಮೀ ಸಂಖ್ಯೆ 686/32ರ ಬಳಿ ಸಾಗುತ್ತಿದ್ದಾಗ ಹಳಿ ಮೇಲೆ ಮರ ಬಿದ್ದಿರುವುದನ್ನು ಲೊಕೊ ಪೈಲಟ್‌ ಪುರುಷೋತ್ತಮ ಹಾಗೂ ಸಹಾಯಕ ಲೊಕೊ ಪೈಲಟ್‌ಪೈಲಟ್ ಮಂಜುನಾಥ ನಾಯ್ಕ್ ಗಮನಿಸಿದ್ದರು. ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದರು‌. ರೈಲ್ವೆ ಸಿಬ್ಬಂದಿಯ ತಂಡವು ಮರವನ್ನು ತೆರವುಗೊಳಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು.

ADVERTISEMENT

ಸಮಯಪ್ರಜ್ಞೆ ತೋರಿ ಅಪಘಾತ ತಪ್ಪಿಸಲು ಕಾರಣರಾದ ಲೊಕೊ ಪೈಲಟ್‌ ಪುರುಷೋತ್ತಮ ಹಾಗೂ ಸಹಾಯಕ ಲೊಕೊ ಪೈಲಟ್‌ ಮಂಜುನಾಥ ನಾಯ್ಕ್ ಅವರಿಗೆ ಕೊಂಕಣ ರೈಲ್ವೆ ನಿಗಮ ನಿಯಮಿತದ ಮುಖ್ಯ ಮಹಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ ಅವರು ತಲಾ ₹15 ಸಾವಿರ ನಗದು ಬಹುಮಾನವನ್ನು ಘೋಷಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ವ್ಯವಸ್ಥಾಪಕಿ (ಸಾರ್ವಜನಿಕ ಸಂಪರ್ಕ) ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಿಗಮದ ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಭಟ್, ಹಾಗೂ ಮುಖ್ಯ ಲೊಕೊ ಇನ್ಸ್‌ಪೆಕ್ಟರ್ ಬಿನು ಕೆ. ಅವರು ಪುರುಷೋತ್ತಮ ಹಾಗೂ ಮಂಜುನಾಥ ನಾಯ್ಕ್ ಅವರಿಗೆ ನಗದು ಬಹುಮಾನವನ್ನು ಸುರತ್ಕಲ್ ರೈಲು ನಿಲ್ದಾಣದಲ್ಲಿ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.