ADVERTISEMENT

ತುಳು ಅಕಾಡೆಮಿ| ಬಹುಮಾನವಿಲ್ಲದ ಗೌರವ ಬೇಡ: ಡಾ.ಅಶೋಕ ಆಳ್ವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 22:36 IST
Last Updated 4 ಸೆಪ್ಟೆಂಬರ್ 2022, 22:36 IST

ಮಂಗಳೂರು: ‘ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನದ ಬದಲು ಕೇವಲ ‘ಗೌರವ’
ಸಲ್ಲಿಸುವುದಾದರೆ ಅದನ್ನು ಸ್ವೀಕರಿಸಲು ಸಿದ್ಧನಿಲ್ಲ’ ಎಂದು ಸಂಶೋಧಕ ಡಾ.ಅಶೋಕ ಆಳ್ವ ತಿಳಿಸಿದ್ದಾರೆ.

‘ತುಳು ಸಾಹಿತ್ಯ ಅಕಾಡೆಮಿ ಆಯ್ಕೆಯಲ್ಲಿ ಲೋಪ; ಪುಸ್ತಕ ಬಹುಮಾನ ‘ಗೌರವ’ಕ್ಕೆ ಸೀಮಿತ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ ಪ್ರಕಟಗೊಂಡ ವರದಿಗೆ
ಪ್ರತಿಕ್ರಿಯಿಸಿರುವ ಅವರು, ‘ತುಳುನಾಡಿನ ಪ್ರಾಣಿ ಜಾನಪದ’ ಎಂಬ ನನ್ನ ಸಂಶೋಧನ ಕೃತಿಗೆ ಅಕಾಡೆಮಿ ಪುಸ್ತಕ ಬಹುಮಾನ ಘೋಷಣೆಯಾಗಿತ್ತು. ನಂತರ, ಇದು ಪಿಎಚ್‌ಡಿ ಸಂಶೋಧನಾ ಕೃತಿ ಎಂಬ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾದವು. ವಾಸ್ತವದಲ್ಲಿ ಇದು ಪಿಎಚ್‌ಡಿ ಸಂಶೋಧನಾ ಕೃತಿಯಾದರೂ 28 ವರ್ಷಗಳ ನಂತರ ಬಹಳಷ್ಟು ಪರಿಷ್ಕರಿಸಿ ಪ್ರಕಟಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT