ADVERTISEMENT

ತುಳುಕೂಟ ಕುವೈಟ್‌: ಅಧ್ಯಕ್ಷರಾಗಿ ಅಬ್ದುಲ್ ರಜಾಕ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 6:16 IST
Last Updated 12 ಡಿಸೆಂಬರ್ 2023, 6:16 IST
ತುಳುಕೂಟ ಕುವೈಟ್‌ನ ನೂತನ ಪದಾಧಿಕಾರಿಗಳು
ತುಳುಕೂಟ ಕುವೈಟ್‌ನ ನೂತನ ಪದಾಧಿಕಾರಿಗಳು   

ಮಂಗಳೂರು: ತುಳುಕೂಟ ಕುವೈಟ್‌ನ 24ನೇ ವಾರ್ಷಿಕ ಮಹಾಸಭೆಯು ಇಂಡಿಯನ್ ಸ್ಕೂಲ್ ಆಫ್ ಎಕ್ಸಲೆನ್ಸ್‌ ‌ಸಭಾಂಗಣದಲ್ಲಿ ಜರುಗಿತು.

ತುಳುಕೂಟ ಕುವೈಟ್‌ನ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ರೋಷನ್ ಕ್ವಾರ್ಡಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2023ನೇ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಹುಮಾನ ನೀಡಲಾಯಿತು.

ADVERTISEMENT

2024ನೇ ವರ್ಷದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ಸುಷ್ಮಾ ಬಂಗೇರ ಪ್ರಕಟಿಸಿದರು.

ನೂತನ ಆಡಳಿತ ಮಂಡಳಿ: ಅಧ್ಯಕ್ಷ- ಅಬ್ದುಲ್ ರಜಾಕ್ ನಿಟ್ಟೆ, ಉಪಾಧ್ಯಕ್ಷ- ಶಂಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ- ಹರೀಶ್ ಭಂಡಾರಿ- ಜೊತೆ ಕಾರ್ಯದರ್ಶಿ- ಶರೋನ್ ಗೊನ್ಸಾಲ್ವಿಸ್, ಕೋಶಾಧಿಕಾರಿ- ರೋಷನ್ ಕ್ವಾರ್ಡಸ್, ಆಂತರಿಕ ಲೆಕ್ಕ ಪರಿಶೋಧಕ- ದಿನೇಶ್ ರಾಮ್ ಬನ್ನಂಜೆ, ಸಾಂಸ್ಕೃತಿಕ ಕಾರ್ಯದರ್ಶಿ- ವಿಜಯ್ ವಿಲ್ಸನ್ ಅಲ್ಬುಕರ್ಕ್, ಕ್ರೀಡಾ ಕಾರ್ಯದರ್ಶಿ- ಶ್ರೀನಾಥ್ ಪ್ರಭು, ಕ್ಷೇಮಾಧಿಕಾರಿ- ವಿಜಯ್ ಕುಮಾರ್ ಕೈರಂಗಳ, ಸಾರ್ವಜನಿಕ ಸಂಪರ್ಕಾಧಿಕಾರಿ- ಲೈನಲ್ ಮಸ್ಕರೇನಸ್.

ಅಬ್ದುಲ್ ರಜಾಕ್ ನಿಟ್ಟೆ  ಮಾತನಾಡಿ, ತುಳುಕೂಟ ಬೆಳ್ಳಿಹಬ್ಬದ ಈ ವರ್ಷದಲ್ಲಿ ಹೆಚ್ಚಿನ ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ತುಳುಕೂಟ ಕುವೈಟ್‌ನ 25ನೇ ವರ್ಷದ ಸ್ಮರಣಾರ್ಥ ನೂತನ ಲಾಂಛನ ಹಾಗು ಸಾಲ್ಮಿಯಾ ಕ್ಲಿನಿಕ್ ಪ್ರಾಯೋಜಕತ್ವದ ತುಳುಕೂಟದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಜಾಕ್ಸನ್ ಡೇಸಾ ಹಾಗೂ ಮನೋಹರ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಭಂಡಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.