ADVERTISEMENT

ಉಜಿರೆ | ಸಂಚಾರ ನಿಯಮ ಪಾಲಿಸಿ: ಪಿಎಸ್‌ಐ ನಿಂಗಪ್ಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:23 IST
Last Updated 1 ಜುಲೈ 2025, 14:23 IST
ಸಂಚಾರ ಪಿಎಸ್‌ಐ ನಿಂಗಪ್ಪ ಅವರು ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಿದರು
ಸಂಚಾರ ಪಿಎಸ್‌ಐ ನಿಂಗಪ್ಪ ಅವರು ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಿದರು   

ಉಜಿರೆ: ಇತ್ತೀಚಿನ ದಿನಗಳಲ್ಲಿ ಯುವಕರು ಸಂಚಾರ ನಿಯಮ ಪಾಲಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಎಲ್ಲರೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು ಎಂದು ಬೆಳ್ತಂಗಡಿ ಸಂಚಾರ‌ ಠಾಣೆ ಪಿಎಸ್‌ಐ ನಿಂಗಪ್ಪ ಸಲಹೆ ನೀಡಿದರು.

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಪಾಲನೆ ಮತ್ತು ಕಾನೂನು ಕುರಿತು ಅವರು ಮಾಹಿತಿ ನೀಡಿದರು.

ವಾಹನ ಚಲಾಯಿಸಲು ಪ್ರಾರಂಭಿಸುವ ಮುನ್ನ ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದ ಅವರು, ಟ್ರಾಫಿಕ್‌ಸಿಗ್ನಲ್, ಅಪರಾಧ ತಡೆ, ಸೈಬರ್‌ವಂಚನೆ ಕುರಿತು ಮಾಹಿತಿ ನೀಡಿದರು.

ADVERTISEMENT

ಎಎಸ್‌ಐ ಚಿನ್ನಪ್ಪ, ಹೆಡ್‌ಕಾನ್‌ಸ್ಟೆಬಲ್ ಸದಾಶಿವ ಭಾಗವಹಸಿದ್ದರು. ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಶ್ರೇಯಾಂಕ್ ಜೈನ್ ಸ್ವಾಗತಿಸಿದರು. ಉಪನ್ಯಾಸಕಿ ತೃಪ್ತಿ ಶೆಟ್ಟಿ ವಂದಿಸಿದರು. ಅಶ್ವಿನ್ ಮರಾಠೆ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.