
ಉಪ್ಪಿನಂಗಡಿ: ಇಲ್ಲಿನ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 28ರಂದು ನಡೆಯಲಿದ್ದು, ಕರೆ ಮುಹೂರ್ತವು ಕೂಟೇಲು ದಡ್ಡು ಬಳಿಯ ನೇತ್ರಾವತಿ ನದಿ ಕಿನಾರೆಯ ಜೋಡುಕರೆಯಲ್ಲಿ ಮಧುಸೂಧನ ಭಟ್ ಪೌರೋಹಿತ್ಯದಲ್ಲಿ ಶನಿವಾರ ನಡೆಯಿತು.
ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈ ಬಾರಿ 40ನೇ ಕಂಬಳ ನಡೆಸಲಾಗುತ್ತಿದ್ದು, ಅದ್ಧೂರಿಯಾಗಿ ನಡೆಸಬೇಕು. ಇನ್ನು 2 ವರ್ಷ ಮಾತ್ರ ಇಲ್ಲಿ ಕಂಬಳ ನಡೆಸಬಹುದು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ನದಿಗೆ ಅಣೆಕಟ್ಟೆ ಮಂಜೂರಾದರೆ ನದಿಯ ಹಿನ್ನೀರಿನಿಂದ ಇಲ್ಲಿ ಕಂಬಳ ನಡೆಸಲು ಅಸಾಧ್ಯ. ಹಿರೇಬಂಡಾಡಿಯಲ್ಲಿ ಜಾಗವಿದ್ದರೂ ಅದು ಕಂಬಳ ನಡೆಸಲು ಸಮರ್ಪಕವಾಗಿಲ್ಲ. ಆದ್ದರಿಂದ ಕಂಬಳ ಆಯೋಜನೆ ಮಾಡಲು ಈ ಭಾಗದಲ್ಲಿ ಬೇರೆ ಜಾಗ ಹುಡುಕಬೇಕಾಗಿದೆ ಎಂದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಕಂಬಳ ಸಮಿತಿ ಗೌರವಾಧ್ಯಕ್ಷ ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಜಯಂತ ಪೊರೋಳಿ, ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಕಾರ್ಯದರ್ಶಿಗಳಾದ ಚಂದ್ರಶೇಖರ ಮಡಿವಾಳ, ಗೌರವ ಸಲಹೆಗಾರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕರುಣಾಕರ ಸುವರ್ಣ ಉಪ್ಪಿನಂಗಡಿ, ನಿರಂಜನ ರೈ ಮಠಂತಬೆಟ್ಟು, ಯು.ರಾಮ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ, ಸಹಸಂಚಾಲಕರಾದ ರಾಜೇಶ್ ಶೆಟ್ಟಿ, ಮಹಾಲಿಂಗ ಕಜೆಕ್ಕಾರು ಭಾಗವಹಿಸಿದ್ದರು.