ADVERTISEMENT

ಉಳ್ಳಾಲ: ಕೆಸರು ಗದ್ದೆಯಲ್ಲಿ ಮಿಂಚಿದ ಸ್ಪೀಕರ್ ಖಾದರ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:37 IST
Last Updated 21 ಜುಲೈ 2025, 2:37 IST
<div class="paragraphs"><p>ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್&nbsp;</p></div>

ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ 

   

ಉಳ್ಳಾಲ: ಇಲ್ಲಿನ ಶ್ರೀ ಚೀರುಂಭ ಭಗವತಿ ಕ್ಷೇತ್ರ ಮತ್ತು ಶ್ರೀ ಚೀರುಂಭ ಭಗವತಿ ತಿಯಾ ಸಮಾಜ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ‘ತೀಯರೆ ಚೇರ್‌‌ಲಿ ಒರಿನಾಳ್’ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಿದರು.

ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದ ಪಕ್ಕದ ಗದ್ದೆಯಲ್ಲಿ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದ ಖಾದರ್‌ ಅವರು ಕೆಸರು ಗದ್ದೆಗೆ ಇಳಿದು ಓಡಾಡಿ ಗಮನ ಸೆಳೆದರು. ‘ಗದ್ದೆಗೆ ನಾನೂ ಇಳಿಯುತ್ತೇನೆ’ ಎಂದು ಹೇಳುತ್ತಲೇ ಪಾಲ್ಗೊಂಡ ಅವರು ಸಮುದಾಯದವರ ಮನರಂಜನೆಯಲ್ಲಿ ಭಾಗಿಯಾದರು.

ADVERTISEMENT

ಬೆಂಗಳೂರಿನ ಶಿಲ್ಪಾ ಎಚ್ ಮತ್ತು ಎಂ.ನವೀನ್ ದಂಪತಿ ಚಾಲನೆ ಕ್ರೀಡಾಕೂಟಕ್ಕೆ ಬೆಳಿಗ್ಗೆ ಚಾಲನೆ ನೀಡಿದರು. ತೊಕ್ಕೊಟ್ಟು ಸಾಯಿ ಪರಿವಾರ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ ಅವರು ಕೆಸರುಗದ್ದೆ ಕೂಟಕ್ಕೆ ಚಾಲನೆ ನೀಡಿದರು. ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಸುರೇಶ್ ಭಟ್ನಾಗರ್ ಉಪಸ್ಥಿತರಿದ್ದರು.

ವಿವಿಧ ವಿನೋದ, ಆಹಾರ ವೈವಿಧ್ಯ, ಹಾಸ್ಯ ವಿನೋದ, ನೃತ್ಯರಂಜನೆ, ಗೀತಗಾಯನ, ಆಟೋಟ ಸ್ಪರ್ಧೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.