ADVERTISEMENT

ಪೊಳಲಿ: ಶಂಕರಪುರ ಮಠದ ಸಾಯಿ ಈಶ್ವರ್ ಗುರೂಜಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:28 IST
Last Updated 22 ಜುಲೈ 2024, 14:28 IST
ಬಂಟ್ವಾಳ ತಾಲ್ಲೂಕಿನ ಪೊಳಲಿ ಕ್ಷೇತ್ರಕ್ಕೆ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಸೋಮವಾರ ಭೇಟಿ ನೀಡಿ ಔಷಧೀಯ ಗಿಡ ವಿತರಿಸಿದರು
ಬಂಟ್ವಾಳ ತಾಲ್ಲೂಕಿನ ಪೊಳಲಿ ಕ್ಷೇತ್ರಕ್ಕೆ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಸೋಮವಾರ ಭೇಟಿ ನೀಡಿ ಔಷಧೀಯ ಗಿಡ ವಿತರಿಸಿದರು   

ಬಂಟ್ವಾಳ: ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಅವರು ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಳಕ್ಕೆ ಔಷಧೀಯ ಗಿಡ ವಿತರಿಸಿದರು.

ದೇಶದಲ್ಲಿ ಮತಾಂತರಕ್ಕೆ ತಡೆ ಮತ್ತು ಸೈನಿಕರಿಗೆ ಶಕ್ತಿ ನೀಡುವುದಕ್ಕಾಗಿ ಶಂಕರಪುರ ದ್ವಾರಕಾಮಯಿ ಮಠವು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ಜುಲೈ 19ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ 38 ಕ್ಷೇತ್ರಗಳ ಪ್ರದಕ್ಷಿಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಮುಖರಾದ ಯಶವಂತ ಪೊಳಲಿ, ವೀಣಾ ಶೆಟ್ಟಿ, ಸತೀಶ್, ನಾಗೇಶ ಆದ್ಯಪಾಡಿ, ಭಾಸ್ಕರ ಎಸ್.ಎಡಪದವು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.