ADVERTISEMENT

ನೆಲ್ಯಾಡಿಯಲ್ಲಿ ವಾಲಿಬಾಲ್ ಟೂರ್ನಿ 5ರಂದು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 13:26 IST
Last Updated 3 ಏಪ್ರಿಲ್ 2025, 13:26 IST
ಬಿ.ಎಸ್.ಸತೀಶ್ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಲಿಲ್ಲಿ ಪಾಯಸ್, ಮೋಹನ್ ಶಿರ್ಲಾಲ್, ಪ್ರಶಾಂತ್ ನೆಲ್ಯಾಡಿ, ಪ್ರಶಾಂತ್ ವರ್ಗೀಸ್‌, ಕೆ.ಜೆ ಜೋಸ್‌ ಪಾಲ್ಗೊಂಡಿದ್ದರು
ಬಿ.ಎಸ್.ಸತೀಶ್ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಲಿಲ್ಲಿ ಪಾಯಸ್, ಮೋಹನ್ ಶಿರ್ಲಾಲ್, ಪ್ರಶಾಂತ್ ನೆಲ್ಯಾಡಿ, ಪ್ರಶಾಂತ್ ವರ್ಗೀಸ್‌, ಕೆ.ಜೆ ಜೋಸ್‌ ಪಾಲ್ಗೊಂಡಿದ್ದರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನೆಲ್ಯಾಡಿ ಸಮಾನಮನಸ್ಕರ ವೇದಿಕೆ ಆಯೋಜಿಸುವ ಪುರುಷರ ಹಾಗೂ ಮಹಿಳೆಯರ ಜಿಲ್ಲಾ ಮಟ್ಟದ ಮೂರನೇ ವರ್ಷದ ವಾಲಿಬಾಲ್ ಟೂರ್ನಿ ಇದೇ 5ರಂದು ನೆಲ್ಯಾಡಿಯ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ.

ಹೊನಲು ಬೆಳಕಿನಲ್ಲಿ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 8 ಮತ್ತು ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ. ಲೆಜೆಂಡ್ಸ್ ಟ್ರೋಫಿಗಾಗಿ ಅನುಭವಿ ಆಟಗಾರರ 4 ತಂಡಗಳ ಪಂದ್ಯಗಳೂ ನಡೆಯಲಿವೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪುರುಷರ ವಿಭಾಗದ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆದ್ದ ತಂಡದಕ್ಕೆ ₹ 15,555 ಮೊತ್ತ ಮತ್ತು ಟ್ರೋಫಿ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ ₹ 11,111, ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ₹ 7,777 ಮತ್ತು ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ ₹ 5,555 ನೀಡಲಾಗುವುದು. ಮಹಿಳಾ ವಿಭಾಗದ ಪಂದ್ಯಗಳು ಸಂಜೆ 4 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆಲ್ಲುವ ತಂಡ ₹ 7,777 ಗಳಿಸಲಿದೆ. ರನ್ನರ್‌ ಅಪ್‌ ತಂಡಕ್ಕೆ ₹ 5,555 ನೀಡಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಮಂಗಳೂರು ತಾಲ್ಲೂಕು ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಲಿಲ್ಲಿ ಪಾಯಸ್ ಮಾತನಾಡಿ ಶಾಲಾ ವಿದ್ಯಾರ್ಥಿಗಳ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಟೂರ್ನಿ ಇದೇ 12ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. 

ಸಮಾನ ಮನಸ್ಕರ ವೇದಿಕೆಯ ಪ್ರಶಾಂತ್ ನೆಲ್ಯಾಡಿ, ಪ್ರಶಾಂತ್ ವರ್ಗೀಸ್‌, ಕೆ.ಜೆ ಜೋಸ್‌ ಮತ್ತು ಮೋಹನ್ ಶಿರ್ಲಾಲ್ ಇದ್ದರು.

ಶ್ರೀ ಗೋಪಾಲಕೃಷ್ಣ ಟ್ರೋಫಿ 6ರಂದು

ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿ ಮತ್ತು ಉಪ್ಪಿನಕುದ್ರು ವಾಲಿಬಾಲ್ ಫ್ರೆಂಡ್ಸ್‌ ಆಯೋಜಿಸಿರುವ ಅಂತರರಾಜ್ಯ ಆಹ್ವಾನಿತ ವಾಲಿಬಾಲ್ ಟೂರ್ನಿ ಇದೇ 6ರಂದು ಸಂಜೆ 7 ಗಂಟೆಯಿಂದ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರಶಸ್ತಿ ವಿಜೇತ ತಂಡಕ್ಕೆ ₹ 1 ಲಕ್ಷ ಮತ್ತು ಟ್ರೋಫಿ ರನ್ನರ್ ಅಪ್ ತಂಡಕ್ಕೆ ₹ 60 ಸಾವಿರ ಮತ್ತು ಟ್ರೋಫಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ ₹ 30 ಸಾವಿರ ನೀಡಲಾಗುವುದು. ಸಿಐಎಸ್‌ಎಫ್ ರಾಂಚಿ ಬೆಂಗಳೂರು ಸ್ಪೈಕರ್ಸ್‌ ಹೈದರಾಬಾದ್ ಸ್ಪೈಕರ್ಸ್‌ ಭಾರತೀಯ ರೈಲ್ವೆ ಕೇರಳ ಸ್ಪೈಕರ್ಸ್‌ ಮತ್ತು ಚೆನ್ನೈ ಚಾಂಪಿಯನ್ಸ್ ತಂಡಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.