ಮಂಗಳೂರು: ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 175 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅ್ಯಂಜಿಯೋಪ್ಲಾಸ್ಟಿ ಹಾಗೂ ಅ್ಯಂಜಿಯೋಗ್ರಾಮ್ ಅನ್ನು ಸೋಮವಾರ ನೆರವೇರಿಸಲಾಯಿತು. ಕಸ್ತೂರಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಹೃದ್ರೋಗತಜ್ಞ ಡಾ.ನರಸಿಂಹ ಪೈ ನೇತೃತ್ವದಲ್ಲಿ ಡಾ. ಶೋಧನ್, ಡಾ.ವಿಜಯ್ ಹಾಗೂ ಶುಶ್ರೂಷಾಧಿಕಾರಿ ಮೇರಿ ತಂಡದವರು ಈ ಐತಿಹಾಸಿಕ ಕಾರ್ಯವನ್ನು ನಿರ್ವಹಿಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಹೆ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ ಈಚೆಗೆ ಕ್ಯಾತ್ಲ್ಯಾಬ್ ಆರಂಭಿಸಲಾಗಿದೆ. ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ಸೇವೆ ಇಲ್ಲಿ ಲಭ್ಯ. ಈಗ ಕ್ಯಾತ್ ಲ್ಯಾಬ್ ಸಂಪೂರ್ಣವಾಗಿ ಕಾರ್ಯಪ್ರವ್ರತ್ತವಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳಿಗೆ ಮಾತ್ರ ಆಯುಷ್ಮಾನ್ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಸ್ಟೆಂಟ್ ಹಾಗೂ ಇತರ ಔಷಧ ಹಾಗೂ ಪರಿಕರಗಳನ್ನ ವೆನ್ಲಾಕ್ ಆಸ್ಪತ್ರೆಯಿಂದ ಒದಗಿಸಲಾಗುತ್ತಿದೆ. ಈ ಕ್ಯಾತ್ಲ್ಯಾಬ್‌ನಲ್ಲಿ ಕ್ರಮೇಣ ಬೇರೆ ಬೇರೆ ವೈದ್ಯಕೀಯ ಸೇವೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.