ADVERTISEMENT

ಮಂಗಳೂರು ಸ್ಫೋಟದ ಆರೋಪಿ ಶಾರೀಕ್‌ನ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:50 IST
Last Updated 21 ನವೆಂಬರ್ 2022, 7:50 IST
ಶಾರೀಕ್‌
ಶಾರೀಕ್‌   

ಶಿವಮೊಗ್ಗ: ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರೀಕ್. ಬಾಲ್ಯದಲ್ಲೇ ತಾಯಿ ಕಳೆದುಕೊಂಡಿದ್ದಾನೆ. ಮಲತಾಯಿ ಶಬಾನಾ ಬಾನು ಆಶ್ರಯದಲ್ಲಿ ಬೆಳೆದಿದ್ದಾನೆ.

ಶಾರಿಕ್ ಬಿ.ಕಾಂ ಪದವೀಧರ. ಆತನ ತಂದೆ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು. ಶಾರಿಕ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಅವರ ತಂದೆ ತೀರಿಕೊಂಡಿದ್ದು, ಆ ಬಳಿಕ ಅಂಗಡಿ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿದ್ದನು.

ಶಾರಿಕ್ ಆರೋಪಿ: ಖಚಿತಪಡಿಸಿದ ಪೊಲೀಸರು
ಮಂಗಳೂರು.ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ನಡೆದ ಸ್ಪೋಟದಲ್ಲಿ ಗಾಯಗೊಂಡು ನಗರದ ಫಾದರ್ ಮಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂಬುದನ್ನು ಆತನ ಕುಟುಂಬದವರು ಖಚಿತ ಪಡಿಸಿದ್ದಾರೆ ಎಂದು ಹೇಳಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಕುಕ್ಕರ್ ಬಾಂಬ್ ಸಾಗಿಸಿದ್ದ. ಮೈಸೂರಿನಲ್ಲಿ ಬಾಂಬ್ ತಯಾರಿಸಿ ತಂದಿದ್ದ. ನ.10ರಂದು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೈಸೂರಿಗೆ ಮರಳಿದ್ದ ಎಂದು ತಿಳಿಸಿದರು.
,'ಆರೋಪಿ ಶಾರಿಕ್ ಗೆ ಬಾಂಬು ತಯಾರಿ ಬಗ್ಗೆ ಭಾರಿ ಪರಿಣತಿ ಇದ್ದಂತೆ ತೋರುತ್ತಿಲ್ಲ. ಹಾಗಾಗಿ ಅದನ್ನು ಪೂರ್ವ ತಯಾರಿ ನಡೆಸಿದಂತೆ ಸ್ಫೋಟಗೊಳಿಸಲು ಸಾಧ್ಯವಾಗಿಲ್ಲ.ಕುಕ್ಕರ್ ಬಾಂಬನ್ನು ಸಾಗಿಸುತ್ತಿದ್ದಾಗಲೇ ಅದು ಸ್ಪೋಟಗೊಂಡಿದ್ದರಿಂದ ಬಾರಿ ಅನಾಹುತ ತಪ್ಪಿದೆ.' ಎಂದರು.
ಆರೋಪಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿರುವ ಉಗ್ರಗಾಮಿ ಸಂಘಟನೆ ಒಂದರಿಂದ ಪ್ರೇರಣೆಗೊಂಡಿದ್ದ. ಈ ಕೃತ್ಯದಲ್ಲಿ ಇನ್ನು ಅನೇಕರು ಭಾಗಿಯಾಗಿದ್ದಾರೆ ಸದ್ಯಕ್ಕೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಒಬ್ಬನನ್ನು ಮಂಗಳೂರಿನಲ್ಲಿ ಇಬ್ಬರನ್ನು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದೇವೆ. ಇನ್ನೊಬ್ಬನನ್ನು ಊಟಿಯಲ್ಲಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಾಗುತ್ತಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.