ನೆಲ್ಯಾಡಿ(ಉಪ್ಪಿನಂಗಡಿ): ಶಿರಾಡಿ ಗ್ರಾಮದ ಉದನೆ ಸಮೀಪ ರೆಖ್ಯ ನೇಲ್ಯಡ್ಕ ಎಂಬಲ್ಲಿ ಶನಿವಾರ ಮಹಿಳೆಯೊಬ್ಬರು ಗುಂಡ್ಯ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದು, ಎನ್‌ಡಿಆರ್‌ಎಫ್ ತಂಡದ ಸದಸ್ಯರು ಹುಡುಕಾಟ ನಡೆಸಿದರು.
ಬೆಳ್ತಂಗಡಿ ತಾಲ್ಲೂಕು ರೆಖ್ಯ ಗ್ರಾಮದ ಊರ್ನಡ್ಕ ನಿವಾಸಿ ಸುಂದರ ಗೌಡ ಎಂಬುವರ ಪತ್ನಿ ಶಕುಂತಲಾ(50) ನೀರಿನಲ್ಲಿ ಬಿದ್ದು ಕಣ್ಮರೆಯಾದವರು. ನಾಟಿ ಔಷಧಕ್ಕಾಗಿ ನೆಲನೆಲ್ಲಿ ತರಲು ಬೆಳಿಗ್ಗೆ 6 ಗಂಟೆ ವೇಳೆಗೆ ಹೊಳೆ ಬದಿಯ ತೋಟಕ್ಕೆ ಹೋದವರು ವಾಪಸ್ ಬರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದಾಗ, ಹೊಳೆ ಬದಿಯಲ್ಲಿ ಚಪ್ಪಲಿ ಕಂಡಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹು
ದೆಂದು ಶಂಕಿಸಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹಾಗೂ ಸೆಳವು ಹೆಚ್ಚಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಕಡಬ, ಧರ್ಮಸ್ಥಳ ಠಾಣೆಯ ಸಿಬ್ಬಂದಿ, ಅರಸಿನಮಕ್ಕಿ, ನೂಜಿಬಾಳ್ತಿಲ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.