ADVERTISEMENT

ಮದ್ಯದಂಗಡಿ ವಿರುದ್ಧ ಮಹಿಳೆಯರ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 9:09 IST
Last Updated 29 ಸೆಪ್ಟೆಂಬರ್ 2022, 9:09 IST
   

ಸುಬ್ರಹ್ಮಣ್ಯ (ದಕ್ಷಿಣ‌ ಕನ್ನಡ): ಹರಿಹರ ಪಲ್ಲತ್ತಡ್ಜ ಗ್ರಾಮದಲ್ಲಿ ಮದ್ಯದಂಗಡಿ ವಿರುದ್ಧದ ಹೋರಾಟ ಭುಗಿಲೆದ್ದಿದೆ.
ಪ್ರತಿಭಟನೆ ನಡೆಸುತಿದ್ದ ಸ್ಥಳದಲ್ಲಿ ಮದ್ಯದಂಗಡಿ ಪರ ಅಪರಿಚಿತ ವ್ಯಕ್ತಿಯೊಬ್ಬರು ಕದ್ದು ವಿಡಿಯೊ ಮಾಡುತ್ತಿದ್ದರು.
ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು.

ಈ ವ್ಯಕ್ತಿಯನ್ನು ತಮ್ಮ ವಶಕ್ಕ ಕೊಡುವಂತೆ ಮಹಿಳೆಯರು, ಗ್ರಾಮಸ್ಥರು ಪೊಲೀಸ್ ಜೀಪ್ ತಡೆದು, ಜೀಪ್ಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು.

ಪ್ರತಿಭಟನೆ ಸ್ಥಳದಲ್ಲಿ ಸೇರಿದ ನೂರಾರು ಜನರು ಸೇರಿದ್ದಾರೆ.
ಮದ್ಯ ಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಹರಿಹರ ಮುಖ್ಯ ಪೇಟೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.