ಮೂಡುಬಿದಿರೆ: ಬಹುಮಾನ ಮತ್ತು ಪ್ರಶಸ್ತಿಗೋಸ್ಕರ ಕತೆ ಬರೆಯುವ ಹೊಸ ವರ್ಗ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿದೆ. ಅವರಿಗೆ ಕತೆಗಳು ಓದುಗರಿಗೆ ತಲುಪಬೇಕೆಂಬ ಆಸಕ್ತಿ ಇರುವುದಿಲ್ಲ. ಆದ್ದರಿಂದ ಅದು ಸಾಹಿತ್ಯ ಸೇವೆ ಆಗುವುದಿಲ್ಲ ಎಂದು ಸಾಹಿತಿ ಪ್ರೇಮಶೇಖರ ಉಡುಪಿ ಹೇಳಿದರು.
ವರ್ಧಮಾನ ಪ್ರಶಸ್ತಿ ಪೀಠ ಕೊಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಕತೆ ಬರೆಯುವುದು ನನಗೆ ಖುಷಿ ಕೊಡುವ ಹವ್ಯಾಸ. ಕತೆ ಬರೆಯುತ್ತಾ ಹೋದಂತೆ ಒಳಗೆ ಹೊಸಲೋಕ ಸೃಷ್ಟಿಯಾಗುತ್ತದೆ ಎಂದರು. ಜೈನಮಠದ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಹಾವೇರಿಯ ವಿಕಾಸ ಹೊಸಮನಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದರು. ಪ್ರಧಾನ ನಿರ್ದೇಶಕ ಡಾ.ನಾ ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ ಭಾಗವಹಿಸಿದ್ದರು. ಮುನಿರಾಜ ರೆಂಜಾಳ ನಿರೂಪಿಸಿದರು. ನಮಿರಾಜ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.