
ಮೂಲ್ಕಿ: ‘ನನ್ನ ಮೂರು ಮಹಾಕಾವ್ಯಕ್ಕೆ ಯಕ್ಷಗಾನವೇ ಪ್ರೇರಣೆಯಾಗಿದೆ. ಸಾವಿರ ಬಾರಿ ದೇವಿಮಹಾತ್ಮೆ ಪ್ರಸಂಗ ನೋಡಿದರೂ ಹೊಸತನ ಕಾಣುತ್ತದೆ. ತರ್ಕಶಕ್ತಿಗೆ ಮಹತ್ವ ಇದೆ. ಗೆಜ್ಜೆ ಸೇವೆಯಿಂದ ವಿಶೇಷ ಶಕ್ತಿ ಬರುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ಕಟೀಲು ರಥಬೀದಿಯಲ್ಲಿ ನಡೆದ ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಯಕ್ಷಗಾನ ಮೇಳದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ, ಮೋಹನ್ ದಾಸ್ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಕಟೀಲು ದೇವಳದ ತ್ಯಾಜ್ಯದಿಂದ ತಯಾರಿಸಿದ ಶಾಖಾಂಬರಿ ಗೊಬ್ಬರವನ್ಬು ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆ ಮಾಡಿದರು. ರಂಗ ನಡೆಗೊಂದು ಕೈಪಿಡಿ ಹಾಗೂ ಪ್ರಸಂಗವಾಚಕ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಯಕ್ಷಕಲಾರಂಗ ಉಡುಪಿ ಸಂಸ್ಥೆಯನ್ನು ಸನ್ಮಾನಿಸಲಾಯಿತು.
ಶಾಸಕ ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನ್ಯಾಯವಾದಿ ಪಿ.ಎಸ್. ರಾಜಗೋಪಾಲ್, ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸನತ್‌ಕುಮಾರ್ ಶೆಟ್ಟಿ, ಶಶಿಧರ ಹೆಗ್ಡೆ, ಭಾಸ್ಕರ ಮೊಯಿಲಿ, ಕೊಡೆತ್ತೂರಿನ ಕಿಶೋರ್ ಶೆಟ್ಟಿ, ಪ್ರವೀಣದಾಸ್ ಭಂಡಾರಿ, ಬಿಪಿನ್‌ಚಂದ್ರ ಶೆಟ್ಟಿ, ತಿಬಾರ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಮತ್ತಿತರರು ಇದ್ದರು.
ನಂತರ ಏಳೂ ಮೇಳದ ಕಲಾವಿದರಿಂದ ಪಾಂಡಾಶ್ವಮೇಧ ಪ್ರಸಂಗ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.