ಬದಿಯಡ್ಕ ಸಮೀಪದ ಎಡನೀರು ಮಠದಲ್ಲಿ ಪ್ರದರ್ಶನಗೊಂಡ ಥಿಯೆಟರ್ ಪರಿಕಲ್ಪನೆಯ ಯಕ್ಷಗಾನ (ಸಂಗ್ರಹ ಚಿತ್ರ)
ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನದ ನಾಟ್ಯ ಹಾಗೂ ಹಿಮ್ಮೇಳ ತರಗತಿ ಆರಂಭವಾಗಲಿದೆ. ಪ್ರತಿ ವಾರ ಬದಿಯಡ್ಕದ ನವಜೀವನ ವಿದ್ಯಾಲಯ (ಮೂಕಾಂಬಿಕ ಸರ್ವಿಸ್ ಸ್ಟೇಷನ್ ಮುಂಭಾಗ) ತರಬೇತಿ ನಡೆಯಲಿದೆ.
ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ ಇಲ್ಲ. ಯಕ್ಷಗಾನದ ಜತೆಗೆ ಯೋಗ, ವ್ಯಕ್ತಿತ್ವ ವಿಕಸನ, ಕ್ರಾಫ್ಟ್ ಮೊದಲಾದ ಕಾರ್ಯಾಗಾರಗಳು ಉಚಿತವಾಗಿವೆ. ತರಬೇತಿ ಬಳಿಕ ರಂಗಸಿರಿಯ ಪ್ರದರ್ಶನ ತಂಡದಲ್ಲಿ ಊರ, ಪರವೂರ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಲಾಗುವುದು. ಜೂನ್ ದ್ವಿತೀಯ ವಾರದಲ್ಲಿ ನೂತನ ತಂಡದ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ತರಗತಿಗೆ ಸೇರಲಿಚ್ಛಿಸುವವರು ಶ್ರೀಶ ಕುಮಾರ ಪಂಜಿತಡ್ಕ ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.