ಜಾಫರ್
ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾಲ ಸಮೀಪದ ಸಂಕೊಳಿಗೆಯಲ್ಲಿ ರೈಲು ಢಿಕ್ಕಿ ಹೊಡೆದು ಯುವಕ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಅವರ ಪುತ್ರ ಜಾಫರ್ (23) ಮೃತರು. ಶನಿವಾರ ಸಂಜೆ ವೇಳೆ ಮನೆಗೆ ಮರಳಲು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ಅವರಿಗೆ ರೈಲು ಢಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದರು.
ಇತ್ತೀಚೆಗಷ್ಟೇ ಮುಂಬೈನಿಂದ ಕೆಲಸ ತ್ಯಜಿಸಿ ಊರಿಗೆ ಮರಳಿದ್ದ ಜಾಫರ್, ಸೌದಿ ವೀಸಾ ಬಂದಿದ್ದರಿಂದ ಫೆ.14 ರಂದು ಅಲ್ಲಿಗೆ ಉದ್ಯೋಗದ ನಿಮಿತ್ತ ತೆರಳಲು ಸಿದ್ಧತೆ ನಡೆಸಿದ್ದರು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.