ADVERTISEMENT

ವೆನ್ಲಾಕ್ ಆಸ್ಪತ್ರೆಯಲ್ಲಿ ವಾಕರ್‌, ಬಟ್ಟೆ, ಸಲಕರಣೆ ವಿತರಣೆ

ಕಾಂಗ್ರೆಸ್‌ ವತಿಯಿಂದ ರಾಹುಲ್‌ ಗಾಂಧಿ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 5:23 IST
Last Updated 20 ಜೂನ್ 2021, 5:23 IST
ಮಂಗಳೂರಿನಲ್ಲಿ ಶನಿವಾರ ಎನ್‌ಎಸ್‌ಯುಐ ಜಿಲ್ಲಾ ಘಟಕ ಸಂಗ್ರಹಿಸಿದ ಬಟ್ಟೆಗಳನ್ನು ರಾಹುಲ್‌ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ನಿರಾಶ್ರಿತರಿಗೆ ವಿತರಿಸಲಾಯಿತು.
ಮಂಗಳೂರಿನಲ್ಲಿ ಶನಿವಾರ ಎನ್‌ಎಸ್‌ಯುಐ ಜಿಲ್ಲಾ ಘಟಕ ಸಂಗ್ರಹಿಸಿದ ಬಟ್ಟೆಗಳನ್ನು ರಾಹುಲ್‌ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ನಿರಾಶ್ರಿತರಿಗೆ ವಿತರಿಸಲಾಯಿತು.   

ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸವಾನ್ ಎಸ್.ಕೆ., ರಮಾನಂದ ಪೂಜಾರಿ ಅವರುಶನಿವಾರ ನಗರದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗವಿಕಲ ರೋಗಿಗಳಿಗೆ ಉಚಿತ ವಾಕರ್ (ಊರುಗೋಲು), ಸಲಕರಣೆಗಳನ್ನು ಹಸ್ತಾಂತರಿಸಿದರು.

ಮಾಜಿ ಶಾಸಕ ಜೆ. ಆರ್. ಲೋಬೊ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ವಾಕರ್‌, ಸಲಕರಣೆ ನೀಡಿರುವುದು ಶ್ಲಾಘನೀಯ. ಬಡ ರೋಗಿಗಳಿಗೆ ಸಹಕಾರಿ ಎಂದರು.

ಮುಖಂಡ ಮಿಥುನ್ ರೈ ಮಾತನಾಡಿ, ರಾಹುಲ್ ಗಾಂಧಿ ಜನ್ಮದಿನ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಿನ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪಕ್ಷ ಒದಗಿಸುತ್ತಿದೆ ಎಂದರು.

ADVERTISEMENT

ಪಕ್ಷದ ಪ್ರಮುಖರಾದ ಲುಕ್ಮಾನ್ ಬಂಟ್ವಾಳ, ಟಿ.ಕೆ. ಸುಧೀರ್, ನೀರಜ್‌ಚಂದ್ರ ಪಾಲ್, ಕೌಶಿಕ್ ಶೆಟ್ಟಿ, ಸಾಜಿದ್, ಉಕ್ಕಾಸ್, ನಾಗೇಂದ್ರ, ನಿತಿನ್ ಆಚಾರ್ಯ, ಗೌತಮ್, ಉದಯ್ ಬೋಳಾರ್, ಕೃತಿನ್ ಕುಮಾರ್, ಆಸ್ಟನ್ ಸಿಕ್ವೇರಾ, ಜೀವನ್ ಮೋರೆ, ಆಸೀಫ್ ಜೆಪ್ಪು, ಶಾನ್ ಡಿಸೋಜ ಇದ್ದರು.

ಬಟ್ಟೆ ವಿತರಣೆ: ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಬಟ್ಟೆ ಸಂಗ್ರಹ ಅಭಿಯಾನದಲ್ಲಿ ಸಂಗ್ರಹಿಸಲಾದ ಬಟ್ಟೆಗಳನ್ನು, ರಾಹುಲ್ ಗಾಂಧಿ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದ 500ಕ್ಕೂ ಅಧಿಕ ನಿರಾಶ್ರಿತರಿಗೆ ವಿತರಿಸಲಾಯಿತು.

ಎನ್ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸವಾದ್ ಸುಳ್ಯ, ಸುಹಾನ್ ಆಳ್ವ, ಅನ್ಸಾರುದ್ದೀನ್ ಸಾಲ್ಮರ, ರಾಜ್ಯ ಸಮಿತಿ ಕಾರ್ಯದರ್ಶಿ ಫಾರೂಕ್ ಬಯಬೆ, ಉಪಾಧ್ಯಕ್ಷರಾದ ನಿಖಿಲ್ ಪೂಜಾರಿ, ಅಂಕುಶ್ ಶೆಟ್ಟಿ, ಬಾತೀಷ್ ಅಳಕೆಮಜಲು, ಶ್ರೀನಿವಾಸ ವಿಶ್ವವಿದ್ಯಾಲಯ ಘಟಕದ ಅಧ್ಯಕ್ಷ ತಮೀಝ್ ಅಳಕೆಮಜಲು, ಅಯಾಝ್ ಚಾರ್ಮಾಡಿ, ಸುಳ್ಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಯಶವಂತ್ ಅಡ್ಯಡ್ಕ, ನಜೀಬ್ ಮಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.