ADVERTISEMENT

ಯುವ ಜನರು ಕೃಷಿಗೆ ಬರಲಿ: ಜೈನ್

ಹಡಿಲು ಗದ್ದೆ ಕೃಷಿಗೆ ಚಾಲನೆ ನೀಡಿದ ಅಭಯಚಂದ್ರ ಜೈನ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 3:34 IST
Last Updated 11 ಜುಲೈ 2021, 3:34 IST
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ಕಿಸಾನ್ ಘಟಕದ ವತಿಯಿಂದ ನಡೆದ ಹಡಿಲು ಗದ್ದೆ ಉಳುಮೆ ಕಾರ್ಯದಲ್ಲಿ ಅಭಯಚಂದ್ರ ಜೈನ್ ಟ್ರ್ಯಾಕ್ಟರ್ ಚಲಾಯಿಸಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ಕಿಸಾನ್ ಘಟಕದ ವತಿಯಿಂದ ನಡೆದ ಹಡಿಲು ಗದ್ದೆ ಉಳುಮೆ ಕಾರ್ಯದಲ್ಲಿ ಅಭಯಚಂದ್ರ ಜೈನ್ ಟ್ರ್ಯಾಕ್ಟರ್ ಚಲಾಯಿಸಿದರು.   

ಮೂಲ್ಕಿ: ‘ತುಳುವರು ಕೃಷಿಯನ್ನೇ ನಂಬಿ ಬದುಕಿದವರು. ಅದರಲ್ಲೂ ಭತ್ತದ ಕೃಷಿ ಅವರಿಗೆ ಪ್ರಮುಖವಾಗಿದೆ. ಇಂದಿರಾ ಗಾಂಧಿ ಉಳುವವನೇ ಹೊಲದೊಡೆಯ ಕಾನೂನಿನ ಮೂಲಕ ಕೃಷಿಗೆ ಪ್ರೋತ್ಸಾಹ ನೀಡಿದರು. ಅವರನ್ನು ಎಂದಿಗೂ ಮರೆಯಬಾರದು. ಇಂದಿನ ಯುವ ಜನರು ಕೃಷಿಗೆ ಮಹತ್ವ ನೀಡಬೇಕು’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಹಾಗೂ ಮೂಲ್ಕಿ ಕಿಸಾನ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಡಿಲು ಗದ್ದೆ ಉಳುಮೆ ಕಾರ್ಯಕ್ರಮಕ್ಕೆ ಶನಿವಾರ ಕಿನ್ನಿಗೋಳಿ ಸಮೀಪದ ಏಳಿಂಜೆ ಪೆರ್ಗುಂಡಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಧಾಕರ ಸಾಲ್ಯಾನ್ ನೇತೃತ್ವ ವಹಿಸಿದ್ದರು.

ADVERTISEMENT

ಅಭಯಚಂದ್ರ ಜೈನ್ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ ಟ್ರ್ಯಾಕ್ಟರ್‌ ಚಲಾಯಿಸಿದರು.
ಧನಂಜಯ ಮಟ್ಟು, ಮೋಹನ್ ಗೌಡ, ಸುಭಾಷ್ ಚೌಟ, ಯೋಗೀಶ್ ಕೋಟ್ಯಾನ್, ಪದ್ಮಿನಿ ವಸಂತ್, ತೆರೇಜಾ ಸೆರಾವೊ, ಲತಾ ಕೃಷ್ಣ, ರಿಚರ್ಡ್‌ ಡಿಸೋಜ, ಸುರೇಶ್ ಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.