ADVERTISEMENT

ಅವನತಿಯತ್ತ ಗ್ರಾಮೀಣ ಕ್ರೀಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:30 IST
Last Updated 18 ಆಗಸ್ಟ್ 2012, 7:30 IST

ಬಸವಾಪಟ್ಟಣ: ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದ ಗ್ರಾಮೀಣ ಕ್ರೀಡೆಗಳು ಇಂದು ಸಂಪೂರ್ಣ ಮರೆಯಾಗುತ್ತಿದ್ದು, ಪುನಶ್ಚೇತನ ನೀಡಬೇಕು ಎಂದು ಕೋಟೆಹಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ರುದ್ರೇಶ್ ಕರೆ ನೀಡಿದರು.

ಸಂಗಾಹಳ್ಳಿಯಲ್ಲಿ ಶುಕ್ರವಾರ ಬಸವಾಪಟ್ಟಣ ಮತ್ತು ಚಿರಡೋಣಿ ಕ್ಲಸ್ಟರ್ ಮಟ್ಟದ ಪ್ರಾಥಮಿಕಶಾಲೆಗಳ  ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ಭಾವನೆ ಇರಬೇಕೇ ಹೊರೆತು, ಸಂಕಚಿತ ಭಾವನೆ ಸಲ್ಲದು ಎಂದು ರತ್ನಮ್ಮ ನುಡಿದರು.
ತಾಲ್ಲೂಕು ದೈಹಿಕ ಶಿಕ್ಷಣ  ನಿರ್ದೇಶಕ ಕೆ. ದೇವೇಂದ್ರಪ್ಪ ಮಾತನಾಡಿ, ಈಕ್ರೀಡಾಕೂಟದಲ್ಲಿ 22 ಶಾಲೆಗಳ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಿಕ್ಷಣ ಸಂಯೋಜಕ ಎಸ್. ಹನುಮಾನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ. ಶಿವಮೂರ್ತಿ, ಈರಮ್ಮ, ಹೇಮಣ್ಣ, ಎಪಿಎಂಸಿ ಸದಸ್ಯ ಎಸ್.ಟಿ. ರಾಜಕುಮಾರ್ ಮಾತನಾಡಿದರು. ಕೆ.ಎಸ್. ಉಮೇಶ್ ಸ್ವಾಗತಿಸಿದರು. ಆರ್.ಬಿ. ಶಿವಕ್ಕ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.