ADVERTISEMENT

ಇಂದು 2ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 6:35 IST
Last Updated 2 ಜುಲೈ 2012, 6:35 IST

ದಾವಣಗೆರೆ: ಜಿಲ್ಲಾ ನ್ಯಾಯಾಂಗ ಇಲಾಖಾ ವಿವಿಧೋದ್ದೇಶ ಸಹಕಾರ ಸಂಘದ 2011-12ನೇ ಸಾಲಿನ ವಾರ್ಷಿಕ 2ನೇ ಮಹಾಸಭೆಯನ್ನು ಜುಲೈ 1ರಂದು ಬೆಳಿಗ್ಗೆ 11ಕ್ಕೆ ದೇವರಾಜ ಅರಸು ಬಡಾವಣೆಯ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ವಕೀಲರ ಭವನದಲ್ಲಿ ಆಯೋಜಿಸಲಾಗಿದೆ.

ಸಂಘದ ಅಧ್ಯಕ್ಷ ಟಿ.ಆರ್. ಹರೀಶಪ್ಪ ಅಧ್ಯಕ್ಷತೆ ವಹಿಸುವರು. ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಬಸವರಾಜ ಎಸ್. ತಡಹಾಳ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಸಭೆಯಲ್ಲಿ, 2011-12ನೇ ಸಾಲಿನ ಜಮಾ ಖರ್ಚು, ಲಾಭ ನಷ್ಟ ಮತ್ತು ಆಸ್ತಿ ಜವಾಬ್ದಾರಿ ತಃಖ್ತೆಗಳನ್ನು ಓದಿ ದಾಖಲು ಮಾಡಲಾಗುವುದು. 2012-13ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಅನುಮೋದನೆಗಾಗಿ ಮಂಡಿಸಲಾಗುವುದು ಎಂದು ಗೌರವ ಕಾರ್ಯದರ್ಶಿ ಬಿ.ಟಿ. ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಘದ ವತಿಯಿಂದ ಜನವರಿಯಲ್ಲಿ ನಡೆಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ, ಈಚೆಗೆ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ, 2010-11ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ನಾಳೆ ರೈತ ಸಂಘದ ಸಭೆ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಸಮಿತಿ ಸಭೆ ಜುಲೈ 2ರ ಮಧ್ಯಾಹ್ನ 12ಕ್ಕೆ ಎಪಿಎಂಸಿ ಟೆಂಡರ್ ಹಾಲ್‌ನಲ್ಲಿ ನಡೆಯಲಿದೆ.

ರಾಜ್ಯ ಘಟಕದ ಉಪಾಧ್ಯಕ್ಷ ಕುರುವ ಗಣೇಶ್, ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಆವರೆಗೆರೆ ಇಟಗಿ ಬಸಪ್ಪ, ಚಿನ್ನಸಮುದ್ರದ ಶೇಖರ್ ನಾಯಕ್, ಚಿಕ್ಕನಹಳ್ಳಿ ಮಲ್ಲೇಶಪ್ಪ, ಈಚಘಟ್ಟದ ರುದ್ರೇಶ್, ಕೊಗ್ಗನೂರು ಶಿಡ್ಲಪ್ಪ, ಅಣಬೇರು ಅಣ್ಣಪ್ಪ, ವಡ್ಡನಹಳ್ಳಿ ನಾರಪ್ಪ, ಕಂದಗಲ್ ಪ್ರೇಮ, ಮಾಯಕೊಂಡದ ಬೀರಪ್ಪ, ಹುಚ್ಚೆವ್ವನಹಳ್ಳಿ ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.