ADVERTISEMENT

ಒಂದೇ ಸೂರಿನಡಿ ಫುಡ್‌ ಕಾರ್ನರ್: ಸ್ಥಳಾವಕಾಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:27 IST
Last Updated 27 ಅಕ್ಟೋಬರ್ 2017, 6:27 IST
ಹೊನ್ನಾಳಿ ತಾಲ್ಲೂಕು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮನೋಜ್ ವಾಲಜ್ಜಿ ಅವರು ಪಟ್ಟಣದಲ್ಲಿ ಫುಡ್‌ ಕಾರ್ನರ್ ಸ್ಥಾಪನೆಗೆ ಸ್ಥಳಾವಕಾಶ ನೀಡಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹೊನ್ನಾಳಿ ತಾಲ್ಲೂಕು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮನೋಜ್ ವಾಲಜ್ಜಿ ಅವರು ಪಟ್ಟಣದಲ್ಲಿ ಫುಡ್‌ ಕಾರ್ನರ್ ಸ್ಥಾಪನೆಗೆ ಸ್ಥಳಾವಕಾಶ ನೀಡಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.   

ಹೊನ್ನಾಳಿ: ಮಾಂಸಾಹಾರಿ, ಸಸ್ಯಾಹಾರಿ ಹೋಟೆಲ್‌ಗಳು ಹಾಗೂ ಮಿನಿ ಉಪಾಹಾರ ಕೇಂದ್ರಗಳಿಂದ (ಫಾಸ್ಟ್ ಫುಡ್) ಪಟ್ಟಣದಲ್ಲಿ ಹತ್ತಾರು ಜನ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಒಂದೇ ಸೂರಿನಡಿ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ತಾಲ್ಲೂಕು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಬುಧವಾರ ಮನವಿ ಮಾಡಿದರು.

ಸಣ್ಣ ವ್ಯಾಪಾರಿಗಳು ರಸ್ತೆ ಬದಿಯಲ್ಲಿ, ಚರಂಡಿ ಪಕ್ಕದಲ್ಲಿ ತಳ್ಳು ಗಾಡಿಗಳಲ್ಲಿ ಆಹಾರ ತಯಾರಿಸಿ ಪ್ರಯಾಣಿಕರಿಗೆ, ಬಡವರಿಗೆ, ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ವ್ಯಾಪಾರಿಗಳಿಗೆ ಒಂದು ನಿಗದಿತ ಸ್ಥಳವಿಲ್ಲ. ಪ್ರತಿ ದಿನ ಆತಂಕದೊಂದಿಗೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಮನೋಜ್ ವಾಲಜ್ಜಿ ಹೇಳಿದರು.

ಸಣ್ಣ ಪುಟ್ಟ ತಿಂಡಿ ಅಂಗಡಿಗಳಿಗೂ ಒಂದು ಶಾಶ್ವತ ನೆಲೆ ದಕ್ಕಿಸಿಕೊಡಲು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮತ್ತು ಪಟ್ಟಣ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.