ADVERTISEMENT

ಚುನಾವಣೆ ನಂತರವೂ ‘ಜಸ್ಟ್‌ ಆಸ್ಕಿಂಗ್’: ಪ್ರಕಾಶ್ ರೈ

ನಟ ಪ್ರಕಾಶ ರೈ ಸ್ಪಷ್ಟನೆ

ಪ್ರಕಾಶ ಕುಗ್ವೆ
Published 6 ಮೇ 2018, 10:07 IST
Last Updated 6 ಮೇ 2018, 10:07 IST

ದಾವಣಗೆರೆ: ‘ಜಸ್ಟ್‌ ಆಸ್ಕಿಂಗ್‌ ಅಭಿಯಾನ ಚುನಾವಣೆ ವೇಳೆಗೆ ಹುಟ್ಟಿದ್ದಲ್ಲ; ಚುನಾವಣೆ ನಂತರವೂ ಇರುತ್ತದೆ. ಕಾಂಗ್ರೆಸ್, ಜೆಡಿಎಸ್‌ ಸರ್ಕಾರಗಳು ಬಂದರೂ ಜಸ್ಟ್‌ ಆಸ್ಕಿಂಗ್‌ ಮುಂದುವರಿಯುತ್ತದೆ’ ಎಂದು ನಟ ಪ್ರಕಾಶ್‌ ರೈ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಚುನಾವಣೆ ನಡೆದ ನಂತರ ಯಾವುದೇ ಸರ್ಕಾರಗಳು ಬಂದರೂ ಕೇಳುವುದಕ್ಕೆ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಪ್ರಶ್ನೆ ಕೇಳುವುದು ನನ್ನೊಬ್ಬನಿಂದ ಆಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಆಂದೋಲನ ಆರಂಭಿಸಿದ್ದೇನೆ. ರಾಜ್ಯದಲ್ಲಿ ಈಗಾಗಲೇ ಮೂರು ಸಾವಿರ ಜನ ಒಟ್ಟಾಗಿದ್ದಾರೆ’ ಎಂದು ಹೇಳಿದರು.

‘ಪ್ರಶ್ನೆ ಕೇಳದಿದ್ದರೆ ಅವಾಗ ಹೇಳಿ. ನನ್ನನ್ನು ನಂಬಿ ಎಂದು ಹೇಳುತ್ತಿಲ್ಲ; ಆದರೆ, ಅನುಮಾನದಿಂದ ನೋಡಿ’ ಎಂದರು.

ADVERTISEMENT

‘ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ; ಇಂತಹವರಿಗೇ ಮತ ಹಾಕಿ ಎಂದು ಹೇಳುವುದಿಲ್ಲ. ಆದರೆ, ಕೋಮು
ವಾದಿಗಳನ್ನು ಅಧಿಕಾರದಿಂದ ದೂರ ಇಡಿ ಎಂಬುದಷ್ಟೇ ನನ್ನ ಮನವಿ; ಅದು ಯಾವುದೇ ಪಕ್ಷದ ಕೋಮುವಾದಿಗಳು ಇರಬಹುದು’ ಎಂದು ಹೇಳಿದರು.

‘ಯಾವುದೇ ಪಕ್ಷಗಳ ಪ್ರಣಾಳಿಕೆಯಲ್ಲಿ ನಂಬಿಕೆ ಇಲ್ಲ. ಜನರೇ ಪ್ರಣಾಳಿಕೆ ರೂಪಿಸುವಂತಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.