ADVERTISEMENT

ಪರಿಸರ ಸಂರಕ್ಷಣೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:17 IST
Last Updated 6 ಜೂನ್ 2013, 5:17 IST

ಮಲೇಬೆನ್ನೂರು: `ಪರಿಸರ ಸಂರಕ್ಷಣೆ ವಿಷಯವನ್ನು ಪ್ರಾಥಮಿಕ ಹಂತದಿಂದ ಪಠ್ಯಕ್ರಮದಲ್ಲಿ ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯ' ಎಂದು ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಜಾಮಿಯಾ ನ್ಯಾಷನಲ್ ಪ್ರೌಢಶಾಲೆಯಲ್ಲಿ ಬುಧವಾರ `ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಕಲುಷಿತವಾಗಿ ಜನಜಾನುವಾರು ರೋಗ ಪೀಡಿತರಾಗಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಕಂಕಣ ಬದ್ಧರಾಗಬೇಕಿದೆ ಎಂದರು.

ಎಪಿಎಂಸಿ ನಿರ್ದೇಶಕ ಪಟೇಲ್ ಮಂಜುನಾಥ್, ಸೈಫುಲ್ಲಾ, ನಿವೃತ್ತ ಮುಖ್ಯಶಿಕ್ಷಕ ಸಜ್ಜನ್ ಮಾತನಾಡಿದರು.
ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಾದ ಮುಸ್ಕಾನುಬಾನು, ಮುಸ್ಕಾನ್‌ತಾಜ್ ಮತ್ತು ಸೈಯದ್ ಜಸ್ಮೀನ್‌ಫಾತಿಮಾ ಅವರಿಗೆ ಬಹುಮಾನ ವಿತರಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಮುಂದಿನ ವರ್ಷದಿಂದ ಪಿಯು ಶಿಕ್ಷಣ ಆರಂಭಿಸಲಾಗುವುದು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಜಾಮಿಯಾ ಮಸೀದಿ ಮುತಾವಲಿ ಮಹಮ್ಮದ್ ರೋಷನ್ ಹೇಳಿದರು.

ಸಂಸ್ಥೆ ನಿರ್ದೇಶಕ ಗುಲಾಬ್ ಷಾ, ಗ್ರಾ.ಪಂ ಸದಸ್ಯ ಫಾಜಿಲ್, ಗ್ರಾ.ಪಂ ಮಾಜಿ ಸದಸ್ಯ ಅಮಾನುಲ್ಲಾ, ಸಕ್ಲೈನ್ ಸಾಹೇಬ್, ಅಬಿದ್ ಅಲಿ ಇದ್ದರು.

ಮುಖ್ಯಶಿಕ್ಷಕ ಸೈಯದ್ ಇಲಿಯಾಸ್ ಸ್ವಾಗತಿಸಿದರು, ಫೈಜ್ ಮಹಮ್ಮದ್ ವಂದಿಸಿದರು.

ವಿದ್ಯುತ್ ವ್ಯತ್ಯಯ
ಮಲೇಬೆನ್ನೂರು: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣ ಕೊಠಡಿ ನವೀಕರಣ ಹಾಗೂ ಯಂತ್ರಗಳ ನಿರ್ವಹಣಾ ಕಾಮಗಾರಿ  ಜೂನ್ 6,7 ಹಾಗೂ 8ರಂದು ನೆಡೆಯಲಿದೆ.

ಹೀಗಾಗಿ, ಇಲ್ಲಿನ ವಿತರಣಾ ಕೇಂದ್ರದಿಂದ ಸರಬರಾಜಾಗುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಶ್ರೀನಿವಾಸ್ ಬುಧವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.